
ಬೆಂಗಳೂರು : ಲೋಕಸಭಾ ಚುನಾವಣೆಗೆ ರಣತಂತ್ರ ರೂಪಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷ ನಾಯಕರ ಮಹಾ ಮೈತ್ರಿಕೂಟ ಸಭೆಗೆ ಮಾಜಿ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಆರ್. ಅಶೋಕ್, ವಿಪಕ್ಷಗಳ ನಾಯಕರು ಎರಡು ದಿನ ಸಭೆ ನಡೆಸೋದು ಕೇವಲ ಫೋಟೋ ಶೋಗೆ , ಎಲ್ಲರು ಕೈ ಮೇಲೆತ್ತಿ ಫೋಟೋಗೆ ಪೋಸ್ ಕೊಡ್ತಾರೆ. 2 ದಿನ ಫೋಟೋ ಶೂಟ್ ಬಿಟ್ರೆ ಏನೂ ಆಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಪಕ್ಷಗಳ ನಾಯಕರಿಗೆ ಯಾರಿಗೂ ಒಂದು ಸಿದ್ದಾಂತಗಳೇ ಇಲ್ಲ. ರಾಜ್ಯಗಳಲ್ಲಿ ಒಬ್ಬರಿಗೊಬ್ಬರು ಬಡಿದಾಡುತ್ತಿದ್ದಾರೆ. 2 ದಿನ ಫೋಟೋ ಶೋ ಬಿಟ್ರೆ ಏನೂ ಆಗಲ್ಲ. ವಿಪಕ್ಷನಾಯಕರಿಗೆ ಪ್ರಧಾನಿ ಮೋದಿ ಅವರೇ ಟಾರ್ಗೆಟ್, ದೇಶದ ಅಭಿವೃದ್ಧಿ ವಿಪಕ್ಷ ನಾಯಕರಿಗೆ ಬೇಕಾಗಿಲ್ಲ. ಪ್ರಧಾನಿ ಮೋದಿ ಈ ದೇಶದ ಅಭಿವೃದ್ಧಿ ಪರವಾಗಿದ್ದು, ದೇಶದ ಜನರು ಮೋದಿ ಅವರ ಜೊತೆಗಿದ್ದಾರೆ ಎಂದರು.