ಮಹಿಳೆಯರಿಗೆ 2000 ರೂ ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಈಗಾಗಲೇ ಮಹಿಳೆಯರ ಖಾತೆಗೆ 2000 ರೂ. ಹಣ ಜಮಾ ಆಗಿದೆ. ಕೆಲವರ ಖಾತೆಗೆ ಜಮಾ ಪ್ರಕ್ರಿಯೆ ನಡೆಯುತ್ತಿದೆ.
ಈ ತಪ್ಪು ಮಾಡಿದ್ರೆ ನಿಮಗೆ ‘ಗೃಹಲಕ್ಷ್ಮಿ’ ಹಣ ಬರಲ್ಲ..!
ಇಲಾಖೆ ಮಾಹಿತಿ ಪ್ರಕಾರ 7-8 ಲಕ್ಷ ಮಹಿಳೆಯರು ಈ ಸಹಾಯಧನದಿಂದ ವಂಚಿತರಾಗಿದ್ದಾರೆ ಎಂದು ಹೇಳಲಾಗಿದೆ. ಹಣ ವರ್ಗಾವಣೆ ಮಾಡುವಾಗ ಅವರ ಖಾತೆಗಳು ಎರರ್ ಬರುತ್ತಿವೆ ಎನ್ನಲಾಗಿದೆ. ಮಹಿಳೆಯರು ಅವರ ಖಾತೆಗಳನ್ನು ಬಳಕೆ ಮಾಡದ ಕಾರಣ ಅವುಗಳು ಕ್ಲೋಸ್ ಆಗಿದೆ. ಹಾಗಾಗಿ ಎರರ್ ಬರುತ್ತಿದೆ ಎನ್ನಲಾಗಿದೆ.
ಬ್ಯಾಂಕ್ ಖಾತೆ ರದ್ದಾಗಿರುವ ಕಾರಣದಿಂದ ಅಂತಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ. ಆದ್ದರಿಂದ ಹಣ ಬಾರದ ಮಹಿಳೆಯರು ಕೂಡಲೇ ತಮ್ಮ ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ಬ್ಯಾಂಕ್ ಗೆ ತೆರಳಿ ಈ ಬಗ್ಗೆ ಪರಿಶೀಲನೆ ಮಾಡಿಸಿ. ಬ್ಯಾಂಕ್ ಗಳಿಗೆ ಹೋಗಿ ಖಾತೆ ಸಕ್ರಿಯ ಮಾಡಿದರೆ ಮುಂದಿನ ತಿಂಗಳಿನಿಂದ ಅವರ ಖಾತೆಗೆ ಗೃಹಲಕ್ಷ್ಮಿಹಣ ಜಮಾ ಆಗುತ್ತದೆ.
ಅದೇ ರೀತಿ ನಿಮ್ಮ ರೇಷನ್ ಕಾರ್ಡ್ ಗೆ KYC ಅಪ್ಡೇಟ್ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಿ. ಆಗದೇ ಇದ್ದಲ್ಲಿ ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗುವ ಮೂಲಕ KYC ಅಪ್ಡೇಟ್ ಮಾಡಿಸಿಕೊಳ್ಳಿ. ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ನಲ್ಲಿರುವ ಮಾಹಿತಿ ಹೊಂದಾಣಿಕೆ ಆಗಿದೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಿ, ಇಲ್ಲವಾದಲ್ಲಿ ಇದನ್ನು ತಿದ್ದುಪಡಿ ಕೂಡ ಮಾಡಿಸಬೇಕು.