
ಬೆಂಗಳೂರು: ಕೃಷಿಯೇತರ ಉದ್ದೇಶದಿಂದ ಪರಿವರ್ತನೆ ಆಗಿ ಅಭಿವೃದ್ಧಿಯಾಗದೇ ಇರುವ ಜಮೀನುಗಳ ನೋಂದಣಿ ಪ್ರಕ್ರಿಯೆಗೆ ಇದ್ದ ತೊಡಕುಗಳನ್ನು ಕಂದಾಯ ಇಲಾಖೆ ನಿವಾರಿಸಿದೆ. ಅಂತಹ ಜಮೀನುಗಳನ್ನು ಕೃಷಿಯೇತರ ಅಭಿವೃದ್ಧಿಯಾಗದ ಜಮೀನು ಎಂದು ಪರಿಗಣಿಸುವಂತೆ ಸೂಚನೆ ನೀಡಲಾಗಿದೆ.
ಕಾವೇರಿ ತಂತ್ರಾಂಶ ಮತ್ತು ಇ- ಖಾತೆ ಸಂಯೋಜನೆಗೊಂಡ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಯಾಗಿದ್ದರೂ ನಿವೇಶನ ಮೊದಲಾದ ಆಸ್ತಿ ಸಂಖ್ಯೆ ಪಡೆಯದೆ ಜಮೀನಿನ ಸ್ವರೂಪದಲ್ಲಿ ಉಳಿದಿದ್ದ ಭೂಮಿಯನ್ನು ಪಹಣಿ ಅಥವಾ ಇ-ಖಾತಾ ಆಧಾರದ ಮೇಲೆ ನೋಂದಣಿ ಮಾಡಿಸಲು ಸಾಧ್ಯವಾಗದೆ ಯಾವುದೇ ವಹಿವಾಟು ಮಾಡಲಾಗದೆ ಸಾರ್ವಜನಿಕರು ಪರದಾಡುವಂತಾಗಿತ್ತು. ಇಂತಹ ಜಮೀನುಗಳನ್ನು ಇನ್ನು ಕೃಷಿಯೇತರ ಅಭಿವೃದ್ಧಿಯಾಗದ ಜಮೀನು ಎಂದು ಪರಿಗಣಿಸಿ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಿಕೊಂಡು ನೋಂದಣಿ ಮಾಡಿಕೊಡಲು ಅವಕಾಶ ಕಲ್ಪಿಸಲಾಗಿದೆ.