ಜಾಗತಿಕ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಅಡಿಡಾಸ್ ಭಾರತೀಯ ಕ್ರಿಕೆಟ್ ತಂಡದ ಅಧಿಕೃತ ಕಿಟ್ ಪ್ರಾಯೋಜಕರಾದ ಕೆಲವು ದಿನಗಳ ನಂತರ ಇದೀಗ ಹೊಸ ಜೆರ್ಸಿಗಳನ್ನು ಪರಿಚಯಿಸಿದೆ. ಮುಂಬರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ಹೊಚ್ಚ ಹೊಸ ಜೆರ್ಸಿಗಳನ್ನು ಹೊರತಂದಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಹಿಂದಿನ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿರುವ ಭಾರತ, ಓವಲ್‌ನಲ್ಲಿ ನಡೆಯುವ ಪ್ಯಾಟ್ ಕಮ್ನ್ಸ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇದಕ್ಕೂ ಮುನ್ನ, ಅಡಿಡಾಸ್ ಇಂಡಿಯಾ ಅಧಿಕೃತವಾಗಿ ಏಕದಿನ ಅಂತಾರಾಷ್ಟ್ರೀಯ, ಟಿ-20 ಮತ್ತು ಟೆಸ್ಟ್ ಕ್ರಿಕೆಟ್ ಗಾಗಿ ಹೊಸ ಭಾರತೀಯ ಕ್ರಿಕೆಟ್ ತಂಡದ ಜರ್ಸಿಯ ಮೊದಲ ನೋಟವನ್ನು ಅನಾವರಣಗೊಳಿಸಿದೆ.
ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ಮೂರು ಬೃಹತ್ ಜೆರ್ಸಿಗಳು ಅನಾವರಣಗೊಳಿಸುತ್ತಿರುವ ವಿಡಿಯೋ ಕ್ರಿಕೆಟ್ ಅಭಿಮಾನಿಗಳ ಮನಸೂರೆಗೊಳಿಸಿದೆ. ಜಾಗತಿಕ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಅಡಿಡಾಸ್ ಇಂಡಿಯಾ ವೆಬ್‌ಸೈಟ್ (www.adidas.co.in) ಮತ್ತು ದೇಶಾದ್ಯಂತ ಮಳಿಗೆಗಳಲ್ಲಿ ಜರ್ಸಿಗಳನ್ನು ಮಾರಾಟ ಮಾಡಲು ಪ್ರಾರಂಭಿಸುತ್ತಿದೆ.
ಕಿಟ್ ಪ್ರಾಯೋಜಕರಾಗಿ ಅಡಿಡಾಸ್ ಜೊತೆ ಬಿಸಿಸಿಐ ಪಾಲುದಾರಿಕೆಯನ್ನು ಘೋಷಿಸಲು ನನಗೆ ಸಂತೋಷವಾಗಿದೆ. ವಿಶ್ವದ ಪ್ರಮುಖ ಕ್ರೀಡಾ ಉಡುಪುಗಳ ಬ್ರ್ಯಾಂಡ್‌ಗಳೊಂದಿಗೆ ನಾವು ಕ್ರಿಕೆಟ್ ಆಟವನ್ನು ಬೆಳೆಸಲು ಬದ್ಧರಾಗಿದ್ದೇವೆ. ಅಡಿಡಾಸ್ ಗೆ ಸ್ವಾಗತ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.