ವೀಕೆಂಡ್ ಮಸ್ತಿಗಾಗಿ ನಂದಿಬೆಟ್ಟಕ್ಕೆ ದೌಡಾಯಿಸುತ್ತಿರುವ ಪ್ರವಾಸಿಗರು: 5 ಕಿ.ಮೀ ಟ್ರಾಫಿಕ್ ಜಾಮ್; ವಾಹನ ಸವಾರರ ಪರದಾಟ

ಚಿಕ್ಕಬಳ್ಳಾಪುರ: ವೀಕೆಂಡ್ ಹಿನ್ನೆಲೆಯಲ್ಲಿ ನಂದಿಬೆಟ್ಟಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಮೋಡಕವಿದ ವಾತಾವರಣ, ಆಗಾಗ ಮಳೆಯ ಸಿಂಚನದ ನಡುವೆ ಪ್ರವಾಸಿಗರು ಸಾಗರೋಪಾದಿಯಲ್ಲಿ ನಂದಿಗಿರಿಧಾಮದತ್ತ ತೆರಳುತ್ತಿದ್ದು, 5 ಕಿ.ಮೀ ವರೆಗೂ ಟ್ರಾಫಿಕ್ ಜಾಮ್ ಸಂಭವಿಸಿದೆ.

ಚಿಕ್ಕಬಳ್ಳಾಪುರದ ನಂದಿಬೆಟ್ಟ ರಸ್ತೆಯಲ್ಲಿ 5 ಕಿ.ಮೀ ವರೆಗೂ ಟ್ರಾಫಿಕ್ ಜಾಮ್ ಆಗಿದ್ದು, ರಸ್ತೆ ತುಂಬೆಲ್ಲ ವಾಹನಗಳು ಕಿಕ್ಕಿರಿದು ನಿಂತಿವೆ. ನಂದಿ ಬೆಟ್ಟದ ಚೆಕ್ ಪೋಸ್ಟ್ ನಿಂದ ಹಿಡಿದು ವಾಹನಗಳು ಸಾಲು ಸಾಲಾಗಿ ನಿಂತಿದ್ದು, ಇತರ ವಾಹನ ಸವಾರರು ಪರದಾಡುವಂತಾಗಿದೆ.

ಮುಂಜಾನೆ 5 ಗಂಟೆಯಿಂದಲೂ ನಂದಿಬೆಟ್ಟದ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದೆ. ನಂದಿಗಿರಿಧಾಮ ಪೊಲೀಸರು ಜನದಟ್ಟಣೆ ಹಾಗೂ ವಾಹನದಟ್ಟಣೆ ನಿಯಂತ್ರಿಸುವಲ್ಲಿ ಹೈರಾಣಾಗಿದ್ದಾರೆ. ನಂದಿಬೆಟ್ಟದಿಂದ ವಾಪಾಸ್ ಆಗುವವರು ಹಾಗೂ ನಂದಿಬೆಟ್ಟದತ್ತ ತೆರಳುತ್ತಿರುವರ ಸಂಖ್ಯೆ ಹೆಚ್ಚಾಗಿದ್ದು, ರಸ್ತೆಯ ಎರಡೂ ಬದಿಯಲ್ಲಿಯೂ ವಾಹನಗಳು ನಿಂತಲ್ಲೇ ನಿಲ್ಲುವಂತಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read