ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಗಾಗಿ 3000 ಕೋಟಿ ರೂಪಾಯಿ ಸಾಲದ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಎರಡನೇ ಹಂತದ ಯೋಜನೆಗೆ ಪೂರ್ಣ ಬಾಹ್ಯ ಸಾಲ ಪಡೆದಂತಾಗಿದೆ.
ಭಾರತ ಸರ್ಕಾರವು ಜರ್ಮನ್ ನ ಹೂಡಿಕೆ ಬ್ಯಾಂಕ್ KFW ಜೊತೆಗೆ 3044.54 ಕೋಟಿ ರೂಪಾಯಿ ಸಾಲಕ್ಕೆ ನವದೆಹಲಿಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮನಿಶಾ ಸಿನ್ಹಾ ಮತ್ತು ಕೆ.ಎಫ್.ಡಬ್ಲ್ಯೂ. ಜರ್ಮನಿಯ ನಿರ್ದೇಶಕಿ ಕ್ಯಾರೊನಿಲ್ ಗ್ಯಾಸ್ನರ್ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಬಿ.ಎಂ.ಆರ್.ಸಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರರಾವ್ ಕೆ.ಎಫ್.ಡಬ್ಲ್ಯೂ. ಕಚೇರಿಯಲ್ಲಿ ಪ್ರತ್ಯೇಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಎರಡನೇ ಹಂತದ ಯೋಜನೆ 75.06 ಕಿಲೋಮೀಟರ್ ಮಾರ್ಗದಲ್ಲಿ ವ್ಯಾಪಿಸಿದ್ದು, ಇದುವರೆಗೆ 12,141.14 ಕೋಟಿ ರೂ. ಸಾಲ ಪಡೆದುಕೊಳ್ಳಲಾಗಿದೆ.