ಹಮಾಸ್ ಉಗ್ರರು ಅಕ್ಟೋಬರ್ 7ರಂದು ನಡೆಸಿದ ದಾಳಿಯ ಸಂದರ್ಭದಲ್ಲಿ ಗಾಜಾ ಪಟ್ಟಿಗೆ ಅಪಹರಿಸಲಾಗಿದ್ದ ಜರ್ಮನ್ – ಇಸ್ರೇಲಿ ಮಹಿಳೆ ಶಾನಿ ಲೌಕ್ ಕುಟುಂಬಕ್ಕೆ ಅವರ ಸಾವಿನ ವಿಚಾರವನ್ನು ತಿಳಿಸಿದೆ.
ದುರಾದೃಷ್ಟವಶಾತ್ ನನ್ನ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ. ಈ ಸುದ್ದಿಯನ್ನು ನಾವು ನಿನ್ನೆ ಸ್ವೀಕರಿಸಿದ್ದೇವೆ ಎಂದು ಲೌಕ್ ತಾಯಿ ರಿಕಾರ್ಡಾ ಜರ್ಮನ್ನ ಸುದ್ದಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
22 ವರ್ಷದ ಮೃತ ಶಾನಿ ಲೌಕ್ ಗಾಜಾ ಗಡಿಯಲ್ಲಿ ನಡೆಯುತ್ತಿದ್ದ ಸಂಗೀತ ಉತ್ಸವವೊಂದರಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಈ ಸ್ಥಳವು ಹಮಾಸ್ ಉಗ್ರರಿಂದ ದಾಳಿಗೆ ಒಳಗಾದ ಇಸ್ರೇಲ್ನ ಮೊದಲ ತಾಣವಾಗಿತ್ತು. ಪ್ಯಾಲೆಸ್ಟೇನಿಯನ್ ಉಡುಪು ಧರಿಸಿದ್ದ ಜನರು ಗುಂಪು ಸಂಗೀತ ಉತ್ಸವದಲ್ಲಿದ್ದ ಅನೇಕರ ಅಪಹರಣ ಮಾಡಿದ್ದು ಇದರಲ್ಲಿ ಶಾನಿ ಕೂಡ ಒಬ್ಬರು.
ಶಾನಿ ಲೌಕ್ ತಾಯಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವಿಡಿಯೋದಲ್ಲಿ ಅರಬೆತ್ತಲೆ ಸ್ಥಿತಿಯಲ್ಲಿದ್ದ ತನ್ನ ಮಗಳನ್ನು ಗುರುತಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು. ಶಾನಿ ಲೌಕ್ ದೇಹದಲ್ಲಿದ್ದ ಟ್ಯಾಟೂ ಹಾಗೂ ಆಕೆಯ ಕೂದಲಿನ ಬಣ್ಣವನ್ನು ತಾಯಿ ಗುರುತಿಸಿದ್ದರು ಎನ್ನಲಾಗಿದೆ. ಶಾನಿ ಲೌಕ್ ತಾಯಿ ನೋಡಿದ ವಿಡಿಯೋದಲ್ಲಿ ಗಾಜಾದಲ್ಲಿ ಶಸ್ತ್ರಸಜ್ಜಿತ ಪುರುಷರಿಂದ ತುಂಬಿದ್ದ ಪಿಕಪ್ ಟ್ರಕ್ನ ಹಿಂಭಾಗದಲ್ಲಿ ಶಾನಿ ಅರೆಬೆತ್ತಲೆಯಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಳು.
ಗಾಜಾ ಪಟ್ಟಿಯ ಗಡಿ ಭಾಗದಲ್ಲಿರುವ ಮರುಭೂಮಿ ಪ್ರದೇಶದಲ್ಲಿ ಭಯೋತ್ಪಾದಕರು ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದ್ದು ಇಲ್ಲಿಂದ ಶಾನಿ ಲೌಕ್ಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು. ಲೌಕ್ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿದ್ದರೂ ಸಹ ಆಕೆಯ ದೇಹವನ್ನು ಇಂದಿಗೂ ಹಿಂದಿರುಗಿಸಿಲ್ಲ ಎನ್ನಲಾಗಿದೆ.