ಅಡುಗೆ ಮಾಡುವುದು ಒಂದು ಕಲೆ. ಐಷಾರಾಮಿ ಹೋಟೆಲ್‌ಗಳು ಮತ್ತು ಡೈನರ್ಸ್‌ಗಳು ತಮ್ಮ ಅಸಾಧಾರಣ ಅಡುಗೆ ವಿಧಾನಗಳು ಮತ್ತು ಕೌಶಲ್ಯಗಳಿಗಾಗಿ ಬಾಣಸಿಗರಿಗೆ ಸಂಭಾವನೆಯಾಗಿ ದೊಡ್ಡ ಮೊತ್ತವನ್ನು ನೀಡಲಾಗುತ್ತೆ.
ಪ್ರತಿಭಾವಂತ ವೃತ್ತಿಪರ ಬಾಣಸಿಗರು ದೊಡ್ಡ ಹೋಟೆಲ್‌ಗೆ ಸೀಮಿತವಾಗಿಲ್ಲ, ರಸ್ತೆಬದಿಯ ತಿನಿಸು ತಯಾರಕೂ ಇದ್ದಾರೆ, ಸಾಧಾರಣ ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳಲ್ಲಿಕೂಡ ಕಾಣಬಹುದು.
ಅಂತಹ ವಿಶಿಷ್ಟ ಪ್ರತಿಭೆಯೊಂದನ್ನು ಉದ್ಯಮಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಗುರುತಿಸಿದ್ದು, ಅವರ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಆ ಬಾಣಸಿಗ ಕೆಲವು ಆಹಾರ ತಯಾರಿಸುತ್ತಿದ್ದು ನಡುವಿನ ಸಮಯದಲ್ಲಿ, ಲೋಹದ ಪಾತ್ರೆಗಳನ್ನು ಬಳಸಿ ಸಂಗೀತದ ವಾತಾವರಣವನ್ನು ಸೃಷ್ಟಿಸುತ್ತಾರೆ.
ಆನಂದ್ ಮಹೀಂದ್ರ ಟ್ವೀಟ್‌ನಲ್ಲಿ, “ಬೆಂಗಳೂರಿನಲ್ಲಿ ನಡೆಯಲಿರುವ ನಮ್ಮ ಮಹೀಂದ್ರ ಪರ್ಕಶನ್ ಫೆಸ್ಟಿವಲ್‌ಗೆ ಈ ವ್ಯಕ್ತಿ ಗೌರವಾನ್ವಿತ ಅತಿಥಿಯಾಗಬೇಕು” ಎಂದು ಸಲಹೆ ನೀಡಿದ್ದಾರೆ.
“ಈ ವ್ಯಕ್ತಿ ಯಾವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆಂದು ನನಗೆ ತಿಳಿದಿಲ್ಲ, ಆದರೆ ಬೆಂಗಳೂರಿನಲ್ಲಿ ನಡೆಯಲಿರುವ ನಮ್ಮ ಮಹೀಂದ್ರ ಪರ್ಕಶನ್ ಫೆಸ್ಟಿವಲ್‌ಗೆ ಅವರು ಗೌರವಾನ್ವಿತ ಅತಿಥಿಯಾಗಬೇಕು. ಲಯ ಮತ್ತು ತಾಳ ಭಾರತದ ಹೃದಯ ಬಡಿತ ಎಂಬುದಕ್ಕೆ ಅವರು ಜೀವಂತ ಸಾಕ್ಷಿ! ಸಂಡೇ ಫೀಲಿಂಗ್.” ಎಂದು ಟ್ವೀಟ್ ಮಾಡಿ ಖುಷಿಪಟ್ಟಿದ್ದಾರೆ.
https://twitter.com/anandmahindra/status/1624677242449330177?ref_src=twsrc%5Etfw%7Ctwcamp%5Etweetembed%7Ctwterm%5E1624677242449330177%7Ctwgr%5E7571d4a7177336cd9dc1c2e3263d883c441e88fd%7Ctwcon%5Es1_&ref_url=https%3A%2F%2Fwww.india.com%2Fviral%2Fmusical-khana-chef-creates-music-with-percussion-and-rhythm-while-preparing-food-watch-viral-video-5894534%2F