ನೆಟ್ ಪ್ರಾಕ್ಟೀಸ್ ಶುರು ಮಾಡಿದ ಧೋನಿ: ಈ ಬಾರಿಯ ಬ್ಯಾಟ್ ನಲ್ಲಿದೆ ವಿಶೇಷತೆ….!

ಮೈದಾನದಲ್ಲಿ ಮಹೇಂದ್ರ ಸಿಂಗ್‌ ಧೋನಿ ನೋಡಲು ಕಾತುರದಲ್ಲಿರುವ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಈ ಬಾರಿ ಐಪಿಎಲ್‌ ಗೆ ಧೋನಿ ತಯಾರಿ ಶುರುವಾಗಿದೆ. ಅವರು ನೆಟ್‌ ಪ್ರಾಕ್ಟೀಸ್‌ ಶುರು ಮಾಡಿದ್ದಾರೆ. ಧೋನಿಯ ನೆಟ್‌ ಪ್ರಾಕ್ಟೀಸ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅವರ ಸ್ನೇಹಿತರು ವಿಡಿಯೋ ಹಂಚಿಕೊಂಡಿದ್ದಾರೆ.

ಧೋನಿ ಪ್ರಾಕ್ಟೀಸ್‌ ನಲ್ಲಿ ಅವರು ಹಿಡಿದಿರುವ ಬ್ಯಾಟ್‌ ವಿಶೇಷತೆ ಪಡೆದಿದೆ. ಧೋನಿ ತಮ್ಮ ಸ್ನೇಹಿತರ ಅಂಗಡಿಯಿಂದ ಬ್ಯಾಟ್‌ ಖರೀದಿ ಮಾಡಿದ್ದಾರೆ. ರಾಂಚಿಯಲ್ಲಿರುವ ಅವರ ಆಪ್ತ ಸ್ನೇಹಿತ ಪರಮ್‌ಜೀತ್ ಸಿಂಗ್ ನಡೆಸುತ್ತಿರುವ ಅಂಗಡಿಯಿಂದ ಬ್ಯಾಟ್‌ ಖರೀದಿ ಮಾಡಿದ್ದಾರೆ. ʼದಿ ಅನ್‌ಟೋಲ್ಡ್ ಸ್ಟೋರಿʼ ಚಿತ್ರದಲ್ಲಿ ಧೋನಿ ಸ್ನೇಹಿತರ ಬಗ್ಗೆ ಮಾಹಿತಿ ಇದೆ. ಧೋನಿಯ ಈ ಸಿಖ್ ಸ್ನೇಹಿತ ರಾಂಚಿಯಲ್ಲಿ ಸಣ್ಣ ಕ್ರೀಡಾ ಅಂಗಡಿಯನ್ನು ನಡೆಸುತ್ತಿದ್ದಾರೆ. ಇವರು ಧೋನಿಗೆ ಮೊದಲ ಪ್ರಾಯೋಜಕತ್ವ ನೀಡಿದ್ದರು. ಇದೀಗ ಧೋನಿ ಅವರಿಗೆ ರಿಟರ್ನ್ ಗಿಫ್ಟ್ ನೀಡಲಿದ್ದಾರೆ.

ಧೋನಿ ಮುಂದಿನ ಐಪಿಎಲ್‌ ನಲ್ಲಿ  ಯಾವುದೇ ಪ್ರಸಿದ್ಧ ಬ್ರಾಂಡ್‌ನ ಸ್ಟಿಕ್ಕರ್‌ಗಳನ್ನು ಹೊಂದಿರುವ ಬ್ಯಾಟ್‌ನೊಂದಿಗೆ ಆಡುತ್ತಿಲ್ಲ. ಅವರ ಬ್ಯಾಟ್‌ನಲ್ಲಿ ಪ್ರೈಮ್ ಸ್ಪೋರ್ಟ್ಸ್ ಹೆಸರು ಕಾಣಿಸಲಿದೆ. ಅದು ಅವರ ಸ್ನೇಹಿತ ಪರಮ್‌ಜಿತ್ ಸಿಂಗ್ ಅವರ ಅಂಗಡಿಯ ಹೆಸರಾಗಿದೆ. ಧೋನಿ ಈ ಪ್ರಚಾರ, ಸ್ನೇಹಿತನಿಗೆ ನೆರವಾಗೋದ್ರಲ್ಲಿ ಸಂಶಯವಿಲ್ಲ.

42 ವರ್ಷದ ಧೋನಿ, ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು, ಐಪಿಎಲ್‌ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಹಿಂದಿನ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ಗೆ ಐದನೇ ಬಾರಿ ಗೆಲುವು ತಂದಿದ್ದ ಧೋನಿ, ನಿವೃತ್ತಿಯಾಗ್ತಾರೆ ಎನ್ನುವ ಊಹೆ ಇತ್ತು. ಆದ್ರೆ ಈಗ ಧೋನಿ ನೆಟ್‌ ಪ್ರಾಕ್ಟೀಸ್‌ ಶುರು ಮಾಡಿದ್ದು, ಅಭಿಮಾನಿಗಳ ಮುಖದಲ್ಲಿ ನಗು ಮೂಡಿದೆ.

https://twitter.com/internetumpire/status/1755251638133268511?ref_src=twsrc%5Etfw%7Ctwcamp%5Etweetembed%7Ctwterm%5E1755251638133268511%7Ctwgr%5E3c5db7a25bfeb273f8efbde489060e3072117f4c%7Ctwcon%5Es1_&ref_url=https%3A%2F%2Fwww.india.com%2Fhindi-news%2Fcricket-hindi%2Fms-dhoni-set-to-play-with-prime-sports-sticker-bats-to-promote-his-friends-shop-6711261%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read