alex Certify ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ ಮಾಯ….!‌ ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ ಮಾಯ….!‌ ಇದರ ಹಿಂದಿದೆ ಈ ಕಾರಣ

Modi's pic removed from Covid vaccine certificate, internet says AstraZeneca effect; Govt reveals REAL REASON

ಕೊರೊನಾ ವಿರುದ್ಧದ ಹೋರಾಟದ ವೇಳೆ ತೆಗೆದುಕೊಂಡಿದ್ದ ಕೋವಿಶೀಲ್ಡ್ ನಿಂದ ಅಡ್ಡ ಪರಿಣಾಮಗಳಿವೆ ಎಂದು ಯುಕೆ ಹೈಕೋರ್ಟ್ ನಲ್ಲಿ ಕೋವಿಶೀಲ್ಡ್ ಲಸಿಕೆ ತಯಾರಿಕಾ ಕಂಪನಿ ಅಸ್ಟ್ರಾಜೆನೆಕಾ ಒಪ್ಪಿಕೊಂಡ ನಂತರ ಆತಂಕ ಹುಟ್ಟಿದ್ದು ದೊಡ್ಡ ಚರ್ಚೆಯಾಗುತ್ತಿದೆ.

ಈ ನಡುವೆ ಅನೇಕರು ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಡೌನ್ ಲೌಡ್ ಮಾಡುತ್ತಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮಾಯವಾಗಿರುವ ಬಗ್ಗೆಯೂ ಚರ್ಚಿಸುತ್ತಿದ್ದಾರೆ. ಅಸ್ಟ್ರಾಜೆನೆಕಾ ಹೇಳಿಕೆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ನಾಪತ್ತೆಯಾಗಿದ್ದೇಕೆ ಎಂದು ಅನೇಕರು ಇಂಟರ್ನೆಟ್ ನಲ್ಲಿ ಪ್ರಶ್ನಿಸಿದ್ದಾರೆ.

“ಮೋದಿ ಜಿ ಇನ್ನು ಮುಂದೆ COVID ಲಸಿಕೆ ಪ್ರಮಾಣಪತ್ರಗಳಲ್ಲಿ ಗೋಚರಿಸುವುದಿಲ್ಲ. ಪರಿಶೀಲಿಸಲು ಪ್ರಮಾಣಪತ್ರ ಡೌನ್‌ಲೋಡ್ ಮಾಡಲಾಗಿದೆ” ಎಂದು ನರೇಂದ್ರ ಮೋದಿ ಫೋಟೋ ಇಲ್ಲದ ಪ್ರಮಾಣಪತ್ರವನ್ನು ಹಂಚಿಕೊಳ್ಳಲಾಗಿದೆ.

ಇದೇ ರೀತಿ ಹಲವರು ಯಾಕೆ ಮೋದಿಯವರ ಫೋಟೋ ನಾಪತ್ತೆಯಾಗಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರತಿಕ್ರಿಯಿಸಿ, 2024 ರ ಲೋಕಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವುದರಿಂದ ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ತೆಗೆದುಹಾಕಲಾಗಿದೆ ಎಂದು ಸ್ಪಷ್ಟಪಡಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...