ಸಂಭೋಗದ ವೇಳೆ ಪಾರ್ಶ್ವವಾಯುಗೆ ತುತ್ತಾದ ಮಾಡೆಲ್….!

ಅಮೆರಿಕಾ ಮೂಲದ 30 ವರ್ಷದ ಯುವತಿ, ಗೆಳೆಯನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ನೋವು ಹಂಚಿಕೊಂಡಿರುವ ಆಕೆ ಸೆಕ್ಸ್ ಮಾಡುವಾಗ ತಾನು ಹೇಗೆ ಪಾರ್ಶ್ವವಾಯುಗೆ ತುತ್ತಾದೆ ಎಂಬುದನ್ನ ತೋಡಿಕೊಂಡಿದ್ದಾಳೆ.

ಯುವತಿ ಮಿಶಾ ಮೊಂಟಾನಾ ಸಂಭೋಗ ವೇಳೆ ತನಗೆ ಮಾತನಾಡಲೂ ಆಗಲಿಲ್ಲ, ಶೀಘ್ರದಲ್ಲೇ ನನ್ನ ಮುಖ ಮರಗಟ್ಟಿತು. ನಡೆಯಲೂ ಆಗದೆ ತನ್ನ ದೇಹದ ಬಲಭಾಗ ನಡೆಯುವ ಸಾಮರ್ಥ್ಯವನ್ನು ಕಳೆದುಕೊಂಡಿತು ಎಂದು ಹೇಳಿದ್ದಾರೆ.

ಇದರಿಂದ ಗಾಬರಿಗೊಂಡ ಆಕೆ ತಕ್ಷಣ ವೈದ್ಯರನ್ನ ಸಂಪರ್ಕಿಸಿದಾಗ ಆಕೆಗೆ ಪಾರ್ಶ್ವವಾಯು ಆಗಿರೋದು ದೃಢಪಟ್ಟಿದೆ. ಆದರೆ ಆರಂಭದಲ್ಲಿ ಮಿಶಾ ಇತಹ ತೊಂದರೆಗೆ ಸಿಲುಕಿದಾಗ ಆಕೆ ಡ್ರಗ್ಸ್ ಸೇವಿಸಿದ್ದಳು ಎಂದೇ ಭಾವಿಸಲಾಗಿತ್ತು. ಆದರೆ ವೈದ್ಯಕೀಯ ಪರಿಶೀಲನೆ ಬಳಿಕ ಆಕೆಗೆ ಪಾರ್ಶ್ವವಾಯು ತಗುಲಿರೋದು ದೃಢಪಟ್ಟಿದೆ. ಸ್ಮರಣ ಶಕ್ತಿ ಕಳೆದುಕೊಂಡಿದ್ದು ದುರ್ಬಲ ದೇಹದಿಂದ ಬಳಲುತ್ತಿದ್ದಾಳೆ.

“ನಾನು ಸಂಭೋಗ ಕ್ರಿಯೆಯಲ್ಲಿದ್ದಾಗ ನನಗೆ ವಿಚಿತ್ರ ಮತ್ತು ಮಂಜಿನ ಅನುಭವವಾಯಿತು. ಆದರೆ ನನಗೆ ಸ್ಟ್ರೋಕ್‌ ಆಗಿದೆ ಎಂದು ತಿಳಿದಿರಲಿಲ್ಲ. ನಾನು
ಹೆಚ್ಚು ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದ್ದೇನೆ ಇದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಈ ರೀತಿಯ ತೊಂದರೆ ಸಂಭವಿಸಿದಾಗ ನಾನು ನಿಜವಾಗಿಯೂ ಸೆಕ್ಸ್ ಮಾಡುತ್ತಿದ್ದೆ. ನಾನು ಮಾತನಾಡಲು ಸಾಧ್ಯವಾಗದ ಕಾರಣ ಏನೋ ತಪ್ಪಾಗಿದೆ ಎಂದು ನನಗೆ ತಿಳಿದಿತ್ತು. ಕೂಡಲೇ ಬಾತ್ ರೂಮಿಗೆ ಹೋದೆ. ನಾನು ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ನನ್ನ ಜೊತೆಗಾರ ನನ್ನತ್ತ ನೋಡಿ ನೀನು ಡ್ರಗ್ಸ್ ಸೇವಿಸಿದ್ದೀಯಾ ಎಂದು ಪ್ರಶ್ನಿಸಿದ್ದ. ನನಗಿನ್ನೂ 30 ವರ್ಷವಾಗಿದ್ದು, ಇಷ್ಟು ಚಿಕ್ಕ ವಯಸ್ಸಿಗೆ ಪಾರ್ಶ್ವವಾಯುಗೆ ತುತ್ತಾಗಿರೋದು ಅಸಾಧ್ಯವೆಂದು ಭಾವಿಸಿದ್ದೆ” ಎಂದಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read