ಐಸ್ ಕ್ರೀಂ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಅದರಲ್ಲೂ ಬೇಸಿಗೆ ಮಾಸಗಳಲ್ಲಿ ಐಸ್ ಕ್ರೀಂಗೆ ಬೇಡಿಕೆ ಇನ್ನಷ್ಟು ಹೆಚ್ಚುತ್ತದೆ. ಬಹುತೇಕರು ಅಂಗಡಿಗೆ ಹೋಗಿ ಐಸ್‌ಕ್ರೀಂ ತರುತ್ತಾರೆ. ಆದರೆ ಕೆಲವರು ಮನೆಯಲ್ಲೇ ಐಸ್ ಕ್ರೀಂ ಮಾಡುತ್ತಾರೆ.
ಉದ್ಯಮಿ ಆನಂದ್ ಮಹಿಂದ್ರಾ ಬುಧವಾರ ಇಂಥದ್ದೇ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಸೀಲಿಂಗ್ ಫ್ಯಾನ್ ಒಂದನ್ನು ಬಳಸಿಕೊಂಡು ಐಸ್ ಕ್ರೀಂಅನ್ನು ಕಡೆಯುತ್ತಿರುವ ಮಹಿಳೆಯ ಐಡಿಯಾವನ್ನು ಮೆಚ್ಚಿಕೊಂಡು ಪೋಸ್ಟ್ ಮಾಡಿದ್ದಾರೆ ಆನಂದ್ ಮಹಿಂದ್ರಾ.
“ಮನಸ್ಸಿದ್ದಲ್ಲಿ ಮಾರ್ಗ. ಹ್ಯಾಂಡ್ ಮೇಡ್ ಹಾಗೂ ಫ್ಯಾನ್ ಮೇಡ್ ಐಸ್‌ಕ್ರೀಂ. ಭಾರತದಲ್ಲಿ ಮಾತ್ರ,” ಎಂದು ಆನಂದ್ ಮಹಿಂದ್ರಾ ಟ್ವೀಟ್ ಮಾಡಿದ್ದಾರೆ.
ಆದರೆ ಐಸ್‌ಕ್ರೀಂ ಮಾಡಲು ಇಷ್ಟೆಲ್ಲಾ ಸಾಹಸ ಮಾಡಬೇಕಾದ ಅಗತ್ಯ ತಾನೇ ಇತ್ತೇ? ಎಂದು ಕೆಲ ನೆಟ್ಟಿಗರು ಪ್ರಶ್ನಿಸಿ ಕಾಮೆಂಟ್ ಮಾಡಿದ್ದಾರೆ.
“ಇಷ್ಟೆಲ್ಲಾ ದಣಿವಿನ ಪಥ ಹಿಡಿಯುವ ಅಗತ್ಯವೇನಿತ್ತು? ವಿಸ್ಕರ್/ಹ್ಯಾಂಡ್-ಬ್ಲೆಂಡರ್ ಒಂದನ್ನು ಬಿಟ್ಟು ಬೇರೆಲ್ಲವನ್ನೂ ಬಳಸಲಾಗಿದೆ ಇಲ್ಲಿ. ಕೈಗೆಟುಕುವ ಬೆಲೆಯಲ್ಲೇ ಇವೆಲ್ಲ ಮಾಡಬಹುದಿತ್ತು. ಐಸ್ ಸಹ ಇದ್ದ ಕಾರಣ ಫ್ರೀಜ಼ರ್ ಸಹ ಇತ್ತು ಎನ್ನಬಹುದು,” ಎಂದಿದ್ದಾರೆ ನೆಟ್ಟಿಗರೊಬ್ಬರು.
“ಈ ಕೆಲಸಕ್ಕೆ ಅಷ್ಟೆಲ್ಲಾ ಶ್ರಮ ಹಾಕುವ ಅಗತ್ಯ ಇರಲಿಲ್ಲ – ಜೊತೆಗೆ ಫ್ಯಾನ್‌ನಿಂದ ಉಂಟಾದ ವಿದ್ಯುತ್ ಬಿಲ್, ಅದನ್ನು ಬಳಸಿದ ವಿಧಾನದಲ್ಲಿದ್ದ ಆರೋಗ್ಯ ಹಾಗೂ ಸುರಕ್ಷತೆ ಸಂಬಂಧಿ ಅಪಾಯಗಳು ಸಹ ಇವೆ. ಅಗ್ಗದಲ್ಲಿ ದೊರಕುವ ಕಾರ್ಮಿಕ ಶಕ್ತಿಯನ್ನು ಇಷ್ಟ ಪಡುವ ಆನಂದ್, ಬಡತನದಿಂದ ಸೃಷ್ಟಿಯಾಗುವ ಐಡಿಯಾಗಳ ಮೇಲೆ ತಮ್ಮ ಪ್ರೀತಿ ತೋರುವುದನ್ನು ಮುಂದುವರೆಸಿದ್ದಾರೆ. ವಿಷಯ ಏನೆಂದರೆ ಆತ ಇದನ್ನು ತಿನ್ನುವುದೂ ಇಲ್ಲ ಅಥವಾ ಅದಕ್ಕೆ ಪಾವತಿಯನ್ನೂ ಮಾಡುವುದಿಲ್ಲ,” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋಗೆ 56,000+ ಲೈಕ್‌ಗಳು ಸಿಕ್ಕಿವೆ.