ಮೊಟ್ಟೆಯಲ್ಲಿ ಪ್ರೋಟೀನ್ ಅಧಿಕವಾಗಿರುವುದರಿಂದ ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಕೆಲವು ಆಹಾರ ಪದಾರ್ಥಗಳನ್ನು ಮೊಟ್ಟೆಯೊಂದಿಗೆ ಮಿಕ್ಸ್ ಮಾಡಿ ಸೇವಿಸಿದರೆ ಅದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಇದು ತೂಕವನ್ನು ಕಡಿಮೆ ಮಾಡುತ್ತದೆ. ಹಾಗಾದ್ರೆ ಅದು ಯಾವ ಪದಾರ್ಥಗಳು ಎಂಬುದನ್ನು ತಿಳಿದುಕೊಳ್ಳಿ.
*ಕಪ್ಪು ಬೀನ್ಸ್ ನಲ್ಲಿ ನಾರಿನಾಂಶ ಹೆಚ್ಚಾಗಿದೆ. ಇದು ಹೊಟ್ಟೆಯ ಸುತ್ತ ಇರುವ ಬೊಜ್ಜನ್ನು ಕರಗಿಸುತ್ತದೆ. ಇದು ನಿಯಮಿತವಾಗಿ ಸೇವಿಸಿದರೆ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ.
*ಬೇಯಿಸಿದ ಮೊಟ್ಟೆಯ ಮೇಲೆ ಕರಿ ಮೆಣಸಿನ ಪುಡಿಯನ್ನು ಸಿಂಪಡಿಸಿ ಸೇವಿಸಿದರೆ ಕೊಬ್ಬು ಕರಗುತ್ತದೆ. ಇದರಿಂದ ತೂಕ ಕಡಿಮೆಯಾಗುತ್ತದೆ.
* ಕ್ಯಾಪ್ಸಿಕಂ ಜೊತೆ ಮೊಟ್ಟೆಯನ್ನು ಸೇವಿಸುವುದರಿಂದ ತೂಕ ಇಳಿಸಲು ಸಹಕಾರಿಯಾಗಿದೆ. ಹಾಗಾಗಿ ಮೊಟ್ಟೆ ಆಮ್ಲೇಟ್ ಮಾಡುವಾಗ ಕ್ಯಾಪ್ಸಿಕಂ ಸೇರಿಸಿದ ಆಮ್ಲೇಟ್ ತಿನ್ನಿ.