BIG NEWS: ಮೀಟರ್ ಬಡ್ಡಿ ದಂಧೆಕೋರನನ್ನು ಕಿಡ್ನ್ಯಾಪ್ ಮಾಡಿ 32 ಲಕ್ಷಕ್ಕೆ ಬೇಡಿಕೆ ಇಟ್ಟ ಆಸಾಮಿ

ಕಾರವಾರ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್, ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ ತಾರಕಕ್ಕೇರಿದೆ. ಈ ನಡುವೆ ಇಲ್ಲೋರ್ವ ವ್ಯಕ್ತಿ ಮೀಟರ್ ಬಡ್ಡಿ ದಂಧೆಕೋರನನ್ನೇ ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಜಮೀರ್ ದರ್ಗಾವಾಲೆ ಎಂಬ ಮೀಟರ್ ಬಡ್ಡಿ ದಂಢೆಕೋರನ ಬೈಕ್ ಗೆ ಕಾರು ಗುದ್ದಿ, ಬಳಿಕ ಆತನನ್ನು ಸಿನಿಮೀಯರಿತಿಯಲ್ಲಿ ಕಾರಿನಲ್ಲಿ ಅಪಹರಿಸಲಾಗಿದೆ. ಈ ವೇಳೆ ಜಮೀರ್ ಕುಟುಂಬಸ್ಥರಿಗೆ ಕರೆ ಮಡಿದ್ದ ಕಿಡ್ನ್ಯಾಪರ್ಸ್ 32 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಭಯಗೊಂಡ ಕುಟುಂಬದವರು ಅಪಹರಣಕಾರರು ಕೇಳಿದ ಹಣದಲ್ಲಿ 18 ಲಕ್ಲ್ಷ ಹಣವನ್ನು ಹೇಲಿದ ಜಾಗಕ್ಕೆ ತಲುಪಿಸಿದ್ದರು. ಬಳಿಕ ಜಮೀರ್ ನನ್ನು ಹಾವೇರಿ ಬಳಿ ಬಿಟ್ಟುಹೋಗಿದ್ದ ಗ್ಯಾಂಗ್ ಅಲ್ಲಿಂದ ಎಸ್ಕೇಪ್ ಆಗಿದೆ. ಅಪಹರಣಕಾರರ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ಒಟ್ಟು 13 ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಮುಖ ಕಿಂಗ್ ಪಿನ್ ಕಳೆದ 20 ದಿನಗಳಿಂದ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ. ಮುಂಬೈಗೆ ತೆರಳಿ ಆರೋಪಿಯನ್ನು ಬಂಧಿಸಿ ಕರೆತರಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read