
ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಚ್ಚರಿಕೆ ಬಳಿಕ ಕೋಲಾರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಕೋಲಾರ ತಾಲೂಕಿನ ಮಾಧವ ಗುರ್ಜೇನಹಳ್ಳಿಯಲ್ಲಿ ಅಪ್ರಾಪ್ತೆ ಮದುವೆಯನ್ನು ಅಧಿಕಾರಿಗಳು ತಡೆದಿದ್ದಾರೆ.
ಗೋಪಾಲ್ ಎಂಬುವರ ಜೊತೆ ನಾಳೆ ಮದುವೆ ನಿಗದಿಯಾಗಿತ್ತು. ಅರಿಶಿನ ಶಾಸ್ತ್ರದ ವೇಳೆ ಅಧಿಕಾರಿಗಳು ದಾಳಿ ನಡೆಸಿ ಬಾಲಕಿಯ ರಕ್ಷಣೆ ಮಾಡಿದ್ದಾರೆ. ಸಿಡಿಪಿಓ ಪವಿತ್ರಾ ಮತ್ತು ಗ್ರಾಮಾಂತರ ಠಾಣೆ ಪೋಲೀಸರು ಕಾರ್ಯಾಚರಣೆ ನಡೆಸಿದ್ದಾರೆ.