alex Certify GOOD NEWS : ಕಡಿಮೆ ದರದಲ್ಲಿ ‘ವಿದ್ಯುತ್’ ನೀಡುವ ನೂತನ ‘ಇಂಧನ ನೀತಿ’ ಜಾರಿಗೆ ಚಿಂತನೆ-ಸಚಿವ ಕೆ.ಜೆ ಜಾರ್ಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS : ಕಡಿಮೆ ದರದಲ್ಲಿ ‘ವಿದ್ಯುತ್’ ನೀಡುವ ನೂತನ ‘ಇಂಧನ ನೀತಿ’ ಜಾರಿಗೆ ಚಿಂತನೆ-ಸಚಿವ ಕೆ.ಜೆ ಜಾರ್ಜ್

ಬೆಂಗಳೂರು : ಕಡಿಮೆ ದರದಲ್ಲಿ ವಿದ್ಯುತ್ ನೀಡುವ ನೂತನ ‘ಇಂಧನ ನೀತಿ’ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಸೋಲಾರ್, ವಿಂಡ್ ಮತ್ತು ಗ್ರೀನ್ ಹೈಡ್ರೋಜನ್ ಇಂಧನ ಉತ್ಪಾದನೆಗೆ ಒತ್ತು ಕೊಡುವ ಹೊಸ ನೀತಿಯೊಂದನ್ನು ಜಾರಿ ಮಾಡಲು ಚಿಂತನೆ ನಡೆದಿದೆ , ಸಾಂಪ್ರಾದಿಯಕವಲ್ಲದ ಮೂಲಗಳಿಂದ ಇಂಧನ ಉತ್ಪಾದಿಸಿದರೆ ಉತ್ಪಾದನಾ ದರ ಕಡಿಮೆಯಾಗುತ್ತದೆ. ಆಗ ಗ್ರಾಹಕರಿಗೂ ಕಡಿಮೆ ದರದಲ್ಲಿ ವಿದ್ಯುತ್ ಕೊಡಬಹುದು. ಈ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದರು.

ಜಲವಿದ್ಯುತ್ ಉತ್ಪಾದನೆಗೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಮೂಲಗಳಿಂದ ವಿದ್ಯುತ್ ಉತ್ಪಾದಿಸಿದರೆ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಹಾಗೆಯೇ ಸೋಲಾರ್ನಿಂದ ಇಂಧನ ಉತ್ಪಾದಿಸಲು ರೈತರಿಂದ ಭೂಮಿ ಗುತ್ತಿಗೆ ಪಡೆಯುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ವಿದ್ಯುತ್ ಸಬ್ಸ್ಟೇಷನ್ ಅಕ್ಕಪಕ್ಕದಲ್ಲಿರುವ ಜಮೀನುಗಳನ್ನು ಲೀಸ್ಗೆ ಪಡೆದು ಸೋಲಾರ್ನಿಂದ ವಿದ್ಯುತ್ ಉತ್ಪಾದಿಸಿ ಆ ಸಬ್ಸ್ಟೇಷನ್ ಮೂಲಕ ಸರಬರಾಜು ಮಾಡಲು ಸಾಧ್ಯವಿದೆ ಎಂದರು. ಸೋಲಾರ್, ವಿಂಡ್ ಮತ್ತು ಗ್ರೀನ್ ಹೈಡ್ರೋ ಇಂಧನ ಉತ್ಪಾದನೆಗೆ ಒತ್ತು ನೀಡಲು ಹೊಸ ನೀತಿಯೊಂದನ್ನು ಜಾರಿ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ ಎಂದರು.

 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದ್ರೆ ಅರ್ಜಿ ರಿಜೆಕ್ಟ್ ಆಗುತ್ತೆ- ಸಚಿವ ಕೆ.ಜೆ ಜಾರ್ಜ್

‘ಗೃಹಜ್ಯೋತಿ’ ಯೋಜನೆ ಯಡಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಉಚಿತ ವಿದ್ಯುತ್ ನೀಡಲಾಗುತ್ತದೆ, ಆದರೆ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದ್ರೆ ಅರ್ಜಿ ರಿಜೆಕ್ಟ್ ಆಗುತ್ತದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿದರು. ಈಗಾಗಲೇ ಗೃಹಜ್ಯೋತಿ ಯೋಜನೆಗೆ 1.43 ಕೋಟಿ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. 200 ಯೂನಿಟ್ ಒಳಗೆ ವಿದ್ಯುತ್ ಬಳಸಿದ್ರೆ ಬಿಲ್ ಪಾವತಿಸುವಂತಿಲ್ಲ. ಒಂದು ವರ್ಷದ ಸರಾಸರಿ ವಿದ್ಯುತ್ ಬಿಲ್ ಪರಿಗಣಿಸಿ ಉಚಿತ ವಿದ್ಯುತ್ ನೀಡಲಾಗುತ್ತೆ. 200 ಯೂನಿಟ್ ಗಿಂತ ಹೆಚ್ಚು ಬಳಸಿದರೆ ಅರ್ಜಿ ರಿಜೆಕ್ಟ್ ಆಗಲಿದೆ ಎಂದರು.

ಜುಲೈ ತಿಂಗಳಿನಲ್ಲಿ ನಿಗದಿತ ವಿದ್ಯುತ್ ಬಳಕೆ ಮಾಡಿದ ಗೃಹಬಳಕೆ ಗ್ರಾಹಕರಿಗೆ ಇಂದಿನಿಂದ ಶೂನ್ಯ ಬಿಲ್ ವಿತರಣೆ ಶುರುವಾಗಲಿದೆ. ಜುಲೈ 1 ರಿಂದ ಬಳಕೆಯಾದ ಗೃಹಬಳಕೆ ವಿದ್ಯುತ್ ಗೆ ಗ್ರಾಹಕರು ಕಳೆದ ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆ ಆಧರಿಸಿ ಅದಕ್ಕಿಂತ ಶೇಕಡ 10ರಷ್ಟು ಹೆಚ್ಚಿನ ವಿದ್ಯುತ್ ಉಚಿತವಾಗಿ ಪಡೆದುಕೊಳ್ಳಬಹುದು. ಜುಲೈ 27ರೊಳಗೆ ನೋಂದಾಯಿಸಿದ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ ಎಂದರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...