ರಾಗಿಹಿಟ್ಟು – 2 ಕಪ್, ಎಣ್ಣೆ – 1 ಟೇಬಲ್ ಸ್ಪೂನ್, ಈರುಳ್ಳಿ – 1 ಕಪ್ ಸಣ್ಣಗೆ ಹಚ್ಚಿದ್ದು, ಹಸಿಮೆಣಸು – 2 ಸಣ್ಣಗೆ ಹಚ್ಚಿದ್ದು, ನುಗ್ಗೆಸೊಪ್ಪು – 3 ಕಪ್ ಸಣ್ಣಗೆ ಹಚ್ಚಿದ್ದು, ಉಪ್ಪು – ರುಚಿಗೆ ತಕ್ಕಷ್ಟು, ನೀರು – 1 ಕಪ್, ಕರಿಬೇವು – 10 ಎಸಳು.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಈರುಳ್ಳಿ, ಕರಿಬೇವು, ಹಸಿಮೆಣಸು ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ನುಗ್ಗೆಸೊಪ್ಪು ಸೇರಿಸಿ 3 ನಿಮಿಷಗಳ ಕಾಲ ಬಾಡಿಸಿಕೊಳ್ಳಿ. ನೀರು ಹಾಕಿ 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಒಂದು ದೊಡ್ಡ ಬೌಲ್ ಗೆ ರಾಗಿಹಿಟ್ಟು, ಉಪ್ಪು ಹಾಕಿ ಮಿಕ್ಸ್ ಮಾಡಿ ಇದಕ್ಕೆ ನುಗ್ಗೆಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ನಾದಿಕೊಳ್ಳಿ.
ಈ ಮಿಶ್ರಣದಿಂದ ಹಿಟ್ಟು ತೆಗೆದುಕೊಂಡು ಉಂಡೆ ಎಣ್ಣೆ ಕವರ್ ತೆಗೆದುಕೊಂಡು ಅದಕ್ಕೆ ತುಸು ಎಣ್ಣೆ ಸವರಿ ಇದರ ಮೇಲೆ ಉಂಡೆ ಇಟ್ಟು ಕೈಯಿಂದ ತಟ್ಟಿಕೊಳ್ಳಿ. ತುಂಬಾ ತೆಳು ಬೇಕಾಗಲ್ಲ. ನಂತರ ಗ್ಯಾಸ್ ಮೇಲೆ ತವಾ ಇಟ್ಟು ಅದಕ್ಕೆ ತುಸು ಎಣ್ಣೆ ಹಾಕಿ ಮಾಡಿಟ್ಟುಕೊಂಡ ರೊಟ್ಟಿ ಹಾಕಿ. ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ರುಚಿಕರವಾದ ರಾಗಿ, ನುಗ್ಗೆಸೊಪ್ಪಿನ ರೊಟ್ಟಿ ಸವಿಯಲು ಸಿದ್ಧ.