alex Certify ಮುಖದ ಸೌಂದರ್ಯ ಹೆಚ್ಚಿಸುತ್ತೆ ಹಾಲಿನ ಮಾಸ್ಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಸೌಂದರ್ಯ ಹೆಚ್ಚಿಸುತ್ತೆ ಹಾಲಿನ ಮಾಸ್ಕ್

ಹಾಲು ಆರೋಗ್ಯಕ್ಕೆ ಎಷ್ಟು ಒಳ್ಳೆಯದೊ ಹಾಗೆ ಸೌಂದರ್ಯಕ್ಕೂ ಅಷ್ಟೇ ಒಳ್ಳೆಯದು.

ಆಗಾಗ ಅದನ್ನು ಉಪಯೋಗಿಸಿ ಚರ್ಮ ರಕ್ಷಣೆ ಮಾಡಿಕೊಂಡರೆ ಕಾಂತಿಯುತವಾದ ತ್ವಚೆಯನ್ನು ಪಡೆಯಬಹುದು. ಹೇಗೆ ಅಂತೀರಾ. ಈ ಟಿಪ್ಸ್ ಫಾಲೋ ಮಾಡಿ.

* ಬಹಳಷ್ಟು ಮಂದಿ ಸನ್ ಸ್ಕ್ರೀನ್ ಲೋಶನ್ ಬಳಸುವುದಿಲ್ಲ. ಹೀಗಾಗಿ ಅವರ ತ್ವಚೆ ಕಪ್ಪು ಅಥವಾ ಕೆಂಪಾಗಿ ಬದಲಾಗಿರುತ್ತದೆ. ಈ ಸಮಸ್ಯೆಗೆ ಹಾಲಿನ ಮಾಸ್ಕ್ ಹಚ್ಚಿಕೊಳ್ಳಬೇಕು. ಶುದ್ಧವಾದ ಬಿಳಿ ಅಥವಾ ತೆಳುವಾದ ಕಾಟನ್ ಬಟ್ಟೆಯನ್ನು ಮುಖದ ಮೇಲೆ ಇಟ್ಟು 5 ನಿಮಿಷಗಳವರೆಗೆ ಒತ್ತಿಟ್ಟುಕೊಳ್ಳಬೇಕು. ಇದರಿಂದ ತ್ವಚೆ ಕ್ಲೀನ್ ಆಗುವುದಲ್ಲದೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

* ಪಪ್ಪಾಯ ಮತ್ತು ಹಾಲಿನ ಮಿಶ್ರಣವನ್ನು ಮುಖಕ್ಕೆ ಪ್ಯಾಕ್ ರೀತಿ ಹಚ್ಚಬೇಕು. ಈ ರೀತಿ ಯಾವಾಗಲೂ ಮಾಡುತ್ತಿದ್ದರೆ, ಮುಖದ ಮೇಲಿನ ಕಪ್ಪು ಕಲೆಗಳು ಹೋಗುವುದಲ್ಲದೆ, ಮುಖವು ಕಾಂತಿಯುತವಾಗಿ ಬದಲಾಗುತ್ತದೆ.

* ಹಾಲಿನಲ್ಲಿ ಹತ್ತಿಯನ್ನು ಅದ್ದಿ ಅದರಿಂದ ಮುಖವನ್ನು ಒರೆಸಿ ಕೊಳ್ಳಬಹುದು. ಇದರಿಂದ ಚರ್ಮದಲ್ಲಿನ ಮೇಕಪ್ ಹಾಗೂ ಧೂಳು ಕೂಡ ಹೊರಹೋಗುತ್ತದೆ.

* ಎರಡು ಮೂರು ಚಮಚ ಹಾಲಿಗೆ ಸ್ವಲ್ಪ ದಾಳಿಂಬೆ ಬೀಜಗಳನ್ನು ಹಾಕಿ ಮೆತ್ತಗೆ ಪೇಸ್ಟ್ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ತುಟಿಗೆ ಹಚ್ಚಿದರೆ ಕಪ್ಪು ಬಣ್ಣ ಕಡಿಮೆಯಾಗಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹಾಗೇ ಮೃದುವಾಗಿ ಬದಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...