
ಆಗ್ರಾ: ಭಾರತೀಯ ವಾಯುಸೇನೆಯ ಮಿಗ್-29 ಫೈಟರ್ ಜೆಟ್ ವಿಮಾನವೊಂದು ಪತನಗೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿ ನಡೆದಿದೆ.
ಆಗ್ರಾದ ಸೊಂಗಾ ಗ್ರಾಮದ ಹೊಲದಲ್ಲಿ ವಿಮಾನ ಪತನಗೊಂಡಿದ್ದು, ನೆಲಕ್ಕಳಿಸಿದ ವಿಮಾನ ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಂಜಾಬ್ ನ ಆದಂಪುರ ಬೇಸ್ ನಿಂದ ತರಬೇತಿಗೆಂದು ಟೇಕಾಫ್ ಆಗಿದ್ದು, ಆಗ್ರಾದತ್ತ ತೆರಳುತ್ತಿದ್ದ ವೇಳೆ ವಿಮಾನ ಏಕಾಏಕಿ ಪತನಗೊಂಡಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಐಎ ಎಫ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.