ಬೆಳಿಗ್ಗೆ ಎಂದಾಕ್ಷಣ ಟೀ, ಕಾಫಿ ಕುಡಿಯುವ ಅಭ್ಯಾಸ ಕೆಲವರಿಗಿರುತ್ತದೆ. ಅಂತಹವರು ಒಮ್ಮೆ ಈ ಮೆಂತೆ ಕಷಾಯ ಮಾಡಿಕೊಂಡು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತೆಪುಡಿ ಮಾಡಿಟ್ಟುಕೊಂಡರೆ ಕೆಲಸ ಸಲೀಸು.
ಬೇಕಾಗುವ ಸಾಮಾಗ್ರಿಗಳು: ¼ ಟೀ ಸ್ಪೂನ್ ಮೆಂತೆಕಾಳು ಪುಡಿ, ಸಣ್ಣ ತುಂಡು ಬೆಲ್ಲ, ನೀರು-1/2 ಕಪ್, ಹಾಲು ½ ಕಪ್.
ಮಾಡುವ ವಿಧಾನ: 1 ಕಪ್ ಮೆಂತೆಕಾಳನ್ನು ಚೆನ್ನಾಗಿ ಹುರಿದುಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ಪುಡಿಮಾಡಿಕೊಳ್ಳಿ.
ನಂತರ ಪಾತ್ರೆಯಲ್ಲಿ ನೀರು ಹಾಕಿ ಅದು ಕುದಿ ಬರುತ್ತಿದ್ದಂತೆ ಬೆಲ್ಲದ ತುಂಡು ಹಾಕಿ ನಂತರ ಮೆಂತೆಕಾಳಿನ ಪುಡಿ ¼ ಟೀ ಚಮಚ ಹಾಕಿ ಚೆನ್ನಾಗಿ ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ. ಕಾಯಿಸಿದ ಹಾಲಿಗೆ ಕುದಿಸಿಕೊಂಡ ಮೆಂತೆದ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಆಮೇಲೆ ಕುಡಿಯಿರಿ.