ಕಂಟೆಂಟ್ ಕ್ರಿಯೇಟರ್ ಗಳಿಗೆ ಸಾಮಾಜಿಕ ಮಾಧ್ಯಮಗಳು ಇಂದು ಅದ್ಭುತ ಅವಕಾಶಗಳನ್ನು ನೀಡಿವೆ. ಇನ್ಸ್ಟಾ, ಯೂಟ್ಯೂಬ್ ನಲ್ಲಿ ಅಸಂಖ್ಯಾತ ಚಂದಾದಾರರನ್ನ ಹೊಂದಿರುವವ ಸೆಲೆಬ್ರಿಟಿಗಳು ಹೆಚ್ಚು ಖ್ಯಾತಿ ಮತ್ತು ಹಣಗಳಿಕೆ ಮಾಡುತ್ತಾರೆ.
ಇದರೊಂದಿಗೆ ಸಾಮಾನ್ಯ ಜನರು ಕೂಡ ತಮ್ಮ ಕಂಟೆಂಟ್ ಮೂಲಕ ಇಂಟರ್ನೆಟ್ ಬಳಕೆದಾರರನ್ನು ಸೆಳೆಯುತ್ತಾರೆ. ಅಂತವರ ಪೈಕಿ ರಾಜೇಶ್ ಎಂಬ ಟ್ರಕ್ ಡ್ರೈವರ್ ಅವರ ಯೂಟ್ಯೂಬ್ ಅಪಾರ ಪ್ರೇಕ್ಷಕರನ್ನು ಆಕರ್ಷಿಸಿದೆ. ಇನ್ ಸ್ಟಾಗ್ರಾಂನಲ್ಲಿ 4.12 ಲಕ್ಷ ಅನುಯಾಯಿಗಳು ಮತ್ತು ಯೂಟ್ಯೂಬ್‌ನಲ್ಲಿ ಬರೋಬ್ಬರಿ 1.2 ಮಿಲಿಯನ್ ಚಂದಾದಾರರನ್ನು ರಾಜೇಶ್ ಹೊಂದಿದ್ದಾರೆ.
ರಾಜೇಶ್ ಅವರ ಚಾನೆಲ್ ರಾಜೇಶ್ ವ್ಲೋಗ್ಸ್ “ಡೈಲಿ ವ್ಲಾಗ್ಸ್ ಆಫ್ ಇಂಡಿಯನ್ ಟ್ರಕ್ ಡ್ರೈವರ್” ಎಂಬ ಶೀರ್ಷಿಕೆಯೊಂದಿಗೆ ದೇಶದ ಅನೇಕ ರಾಜ್ಯಗಳಾದ್ಯಂತ ದೀರ್ಘ-ಪ್ರಯಾಣದ ಟ್ರಕ್ಕಿಂಗ್ ಪ್ರಪಂಚದ ಚಿತ್ರಣವನ್ನು ನೀಡುತ್ತದೆ. ಅವರ ವ್ಲಾಗ್‌ಗಳಲ್ಲಿ ಕೇವಲ ರಸ್ತೆಗಳು ಮತ್ತು ಗಮ್ಯಸ್ಥಾನಗಳ ಬಗ್ಗೆಯಷ್ಟೇ ಅಲ್ಲದೇ ಪ್ರಯಾಣದಲ್ಲಿ ತಯಾರಿಸುವ ಹಲವು ಆಹಾರ ಪದಾರ್ಥಗಳ ತಯಾರಿಕೆ ವಿಧಾನವನ್ನು ತಿಳಿಸುತ್ತವೆ.
ಟ್ರಕ್ ಕ್ಯಾಬಿನ್ ಒಳಗೆ ಹಲವು ಖಾದ್ಯಗಳನ್ನು ತಯಾರಿಸುವ ವಿಡಿಯೋಗಳನ್ನು ಇವರ ಯೂಟ್ಯೂಬ್ ವಾಹಿನಿಯಲ್ಲಿ ನೋಡಬಹುದು. ತಯಾರಿಸಿದ ಭಕ್ಷ್ಯಗಳನ್ನು
ತಮ್ಮ ಸಹ ಚಾಲಕರೊಂದಿಗೆ ಹಂಚಿಕೊಳ್ಳುವ ಹಲವು ವಿಡಿಯೋಗಳು ಸಾಕಷ್ಟು ವೀಕ್ಷಣೆ ಗಳಿಸಿವೆ.
ಅವರ ಪ್ರತಿ ವಿಡಿಯೋ ಹೆಚ್ಚು ವೀಕ್ಷಣೆ ಗಳಿಸುತ್ತಿದ್ದು ನಿಮ್ಮ ಸಾಮಾಜಿಕ ಜಾಲತಾಣ ತಂಡಕ್ಕೆ ಯಾರನ್ನಾದರೂ ನೇಮಿಸಿಕೊಳ್ಳುತ್ತಿದ್ದೀರಾ ಎಂದು ಅವರ ಖ್ಯಾತಿಯ ಬಗ್ಗೆ ತಮಾಷೆ ಮಾಡಿದ್ದಾರೆ.