ಉತ್ತರ ಪ್ರದೇಶದ ಮೀರತ್‌ನಲ್ಲಿ ಶನಿವಾರ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದು, ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ(ಡಿಎಂ) ದೀಪಕ್ ಮೀನಾ ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್) ತಂಡಗಳು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಕಾರ, ಅವಶೇಷಗಳಲ್ಲಿ ಸಿಲುಕಿದ್ದ ಎಲ್ಲಾ 15 ಜನರನ್ನು ರಕ್ಷಿಸಲಾಗಿದೆ, ಅವರಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ.
ಮೀರತ್‌ನ ಜಾಕಿರ್ ಕಾಲೋನಿ ಪ್ರದೇಶದಲ್ಲಿ ಸಂಜೆ ಈ ಘಟನೆ ನಡೆದಿದೆ. ಮನೆಯವರು ಮತ್ತು ಸಂಬಂಧಿಕರು ಹೇಳಿದಂತೆ, 15 ಜನರು ಮನೆಯ ಅವಶೇಷಗಳಲ್ಲಿ ಸಿಲುಕಿದ್ದಾರೆ. ಅದರಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ ಮತ್ತು 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಅವಶೇಷಗಳಲ್ಲಿ ಯಾವುದೇ ಮಾನವ ಜೀವ ಇರುವ ಸಾಧ್ಯತೆಯನ್ನು ನಾವು ಕಂಡುಕೊಳ್ಳುವವರೆಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಮೀನಾ ಹೇಳಿದ್ದಾರೆ.