ಮಾರುತಿ ಸುಜುಕಿ ಇಂಡಿಯಾ ಕಂಪನಿ ‘ಮಾರುತಿ 3.0’ ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ. ಇದರ ಅಡಿಯಲ್ಲಿ 2030-31ರ ವೇಳೆಗೆ ಮಾರುಕಟ್ಟೆಗೆ ಸುಮಾರು 28 ಮಾದರಿಯ ವಾಹನಗಳನ್ನು ಪರಿಚಯಿಸಲು ಯೋಜಿಸಿದೆ.
ಜೊತೆಗೆ ಕಂಪನಿಯ ಉತ್ಪಾದನಾ ಸಾಮರ್ಥ್ಯವನ್ನು 20 ಲಕ್ಷ ಯುನಿಟ್‌ಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಮಾರುತಿ ಸುಜುಕಿ ಇಂಡಿಯಾ ತನ್ನ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು 8 ವರ್ಷಗಳಲ್ಲಿ 40 ಲಕ್ಷ ಯೂನಿಟ್‌ಗಳಿಗೆ ದ್ವಿಗುಣಗೊಳಿಸಲು ಸುಮಾರು 45,000 ಕೋಟಿ ಹೂಡಿಕೆ ಮಾಡಿದೆ.
ಕಂಪನಿಯ ಮುಂದಿರುವ ಸಮಯವು ಅತ್ಯಂತ ಅನಿಶ್ಚಿತ ಮತ್ತು ಸವಾಲಿನದ್ದಾಗಿದೆ ಅಂತಾ ಮಾರುತಿ ಸಂಸ್ಥೆಯ ಅಧ್ಯಕ್ಷ ಆರ್.ಸಿ. ಭಾರ್ಗವ ಹೇಳಿದ್ದಾರೆ. ಮುಂಬರುವ ಕೆಲವು ವರ್ಷಗಳಲ್ಲಿ ಮಾರುತಿ ಸುಜುಕಿ ಅತ್ಯಂತ ಆಕ್ರಮಣಕಾರಿ ಮೋಡ್‌ನಲ್ಲಿರಲಿದೆ. ಇದು ಸಹಜವಾಗಿಯೇ ಟಾಟಾ, ಮಹೀಂದ್ರಾ ಸೇರಿದಂತೆ ಇತರ ಕಾರು ಕಂಪನಿಗಳಿಗೂ ಸವಾಲಾಗಿ ಪರಿಣಮಿಸಲಿದೆ. ಮಾರುತಿ ಸುಜುಕಿಯೊಂದಿಗೆ ಸ್ಪರ್ಧಿಸಬೇಕಾದರೆ ಉಳಿದ ಕಂಪನಿಗಳು ಕೂಡ ಅನೇಕ ಹೊಸ ಮಾದರಿಗಳನ್ನು ಮಾರುಕಟ್ಟೆಗೆ ತರಲೇಬೇಕು.
ಮಾರುತಿ ಸುಜುಕಿ ಎಲೆಕ್ಟ್ರಿಕ್ ವೆಹಿಕಲ್ಸ್ (ಇವಿ), ಹೈಬ್ರಿಡ್, ಸಿಎನ್‌ಜಿ, ಎಥೆನಾಲ್ ಮಿಶ್ರಿತ ಮತ್ತು ಸಂಕುಚಿತ ಜೈವಿಕ ಅನಿಲ ನೀಡುವ ತಂತ್ರಜ್ಞಾನಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಇನ್ನಷ್ಟು ಹೊಸ ಹೊಸ ತಂತ್ರತ್ರಜ್ಞಾನಗಳು ಮುಂದಿನ 8-10 ವರ್ಷಗಳಲ್ಲಿ ಬರಬಹುದು ಅನ್ನೋದು ಕಂಪನಿಯ ಲೆಕ್ಕಾಚಾರ. ಅದಕ್ಕೆ ತಕ್ಕಂತೆ ಹೊಸ ಹೊಸ ಮಾದರಿಗಳನ್ನು ರಸ್ತೆಗಿಳಿಸಲು ಪ್ಲಾನ್ ಸಿದ್ಧಪಡಿಸಲಾಗಿದೆ.