ಬೆಂಗಳೂರು: ಇಂದಿನಿಂದ ಸಿಇಟಿ ಅಂಕ ದಾಖಲಾತಿ ಪೋರ್ಟಲ್ ಸಕ್ರಿಯಗೊಳಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಸಿಬಿಎಸ್‌ಇ, ಐಸಿಎಸ್ಇ, ಐಸಿಸಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಲ್ಲಿ 2024ನೇ ಸಾಲಿನ ಯುಜಿ ಸಿಇಟಿ ಬರೆದಿರುವವರು ತಮ್ಮ ಅಂಕಗಳನ್ನು ಆನ್ಲೈನ್ ಮೂಲಕ ದಾಖಲಿಸಲು ಮೇ 14ರಿಂದ 20ರವರೆಗೆ ವೆಬ್ ಪೋರ್ಟಲ್ ಸಕ್ರಿಯಗೊಳಿಸಲಾಗುತ್ತದೆ.
ಸಿಬಿಎಸ್‌ಇ, ಐಸಿಎಸ್ಇ, ಐಸಿಸಿಎಸ್ಇ ಅಭ್ಯರ್ಥಿಗಳು ಮೇ 20ರೊಳಗೆ ಕಡ್ಡಾಯವಾಗಿ ತಮ್ಮ 12ನೇ ತರಗತಿಯ ಅಂಕಗಳ ವಿವರಗಳನ್ನು https.kea.kar.nic.in ವೆಬ್ಸೈಟ್ ನಲ್ಲಿ ನಿಗದಿತ ಲಿಂಕ್ ಮೂಲಕ ದಾಖಲಿಸಬೇಕು. ಅಂಕಪಟ್ಟಿಯ ಪಿಡಿಎಫ್ ಪ್ರತಿಯನ್ನು ತಪ್ಪದೇ ಅಪ್ಲೋಡ್ ಮಾಡಬೇಕು. 2024ಕ್ಕೆ ಹಿಂದಿನ ವರ್ಷಗಳಲ್ಲಿ ಕರ್ನಾಟಕ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಮತ್ತು 12ನೇ ತರಗತಿ ಉತ್ತೀರ್ಣರಾದವರೂ ಅಂಕಗಳನ್ನು ದಾಖಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.