ಕೆಲವೊಬ್ಬರ ಒಳ್ಳೆಯ ಕಾರ್ಯಗಳನ್ನು ಗಮನಿಸುವಾಗ ಮಾನವೀಯತೆ ಇನ್ನೂ ಇದೆ ಅನ್ನೋದನ್ನು ಪ್ರೂವ್ ಮಾಡುತ್ತದೆ. ಅದೆಷ್ಟೋ ಹೃದಯಸ್ಪರ್ಶಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ಈ ಪಟ್ಟಿಗೆ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.
ಮಳೆಗೆ ಒದ್ದೆಯಾಗುತ್ತಿದ್ದ ತಾಯಿ-ಮಗುವಿಗೆ ವ್ಯಕ್ತಿಯೊಬ್ಬರು ಕೊಡೆ ನೀಡಿ ಸಹಾಯ ಮಾಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಅಪರಿಚಿತ ವ್ಯಕ್ತಿಯ ನಡೆ ಆನ್‌ಲೈನ್‌ನಲ್ಲಿ ಹಲವರ ಹೃದಯಗಳನ್ನು ಗೆದ್ದಿದೆ. ತಾನು ಒದ್ದೆಯಾದರೂ ಪರವಾಗಿಲ್ಲ, ತಾಯಿ-ಮಗು ಒದ್ದೆಯಾಗಬಾರದೆಂದು ವ್ಯಕ್ತಿ ಕೊಡೆ ನೀಡಿರುವುದು ಎಂಥವರ ಹೃದಯವನ್ನೂ ಕರಗಿಸಬಲ್ಲದು.
ದಯೆಯಿಂದ ಜಗತ್ತನ್ನು ಬದಲಾಯಿಸೋಣ. ಮಳೆಯಲ್ಲಿ ತನ್ನ ಮಗುವನ್ನು ಹೊತ್ತೊಯ್ಯುತ್ತಿದ್ದ ತಾಯಿಗೆ ವ್ಯಕ್ತಿಯೊಬ್ಬ ತನ್ನ ಕೊಡೆ ನೀಡಿ ಸಹಕರಿಸಿದ್ದಾನೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಶೀರ್ಷಿಕೆ ಸಹಿತ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮಗುವನ್ನು ಆತುರದಿಂದ ಹೊತ್ತೊಯ್ಯುತ್ತಿರುವುದನ್ನು ಕಾಣಬಹುದು. ಈ ವೇಳೆ ಅಪರಿಚಿತ ವ್ಯಕ್ತಿ ತನ್ನಲ್ಲಿದ್ದ ಕೊಡೆಯನ್ನು ಮಹಿಳೆಗೆ ನೀಡುತ್ತಾನೆ. ಕೊಡೆ ಸ್ವೀಕರಿಸಿದ ಮಹಿಳೆ ಬಗ್ಗಿ ನಮಸ್ಕರಿಸುತ್ತಾ ಧನ್ಯವಾದ ಹೇಳಿದ್ದಾಳೆ. ಸದ್ಯ, ಈ ವಿಡಿಯೋ 1.5 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ.
https://www.youtube.com/watch?v=a0BSqitTYAo