ಕೌಲಾಲಂಪುರ್: ಮಲೇಷಿಯಾದ ಚಾರ್ಟರ್ ಪ್ಲೇನ್ ಕೌಲಾಲಂಪುರ್ ಹೆದ್ದಾರಿ ಬಳಿ ಅಪಘಾತಕ್ಕೀಡಾಗಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ.
ಗುರುವಾರ ಮಲೇಷ್ಯಾದ ಕೌಲಾಲಂಪುರ್ ನ ಉತ್ತರಕ್ಕೆ ಎಕ್ಸ್ ಪ್ರೆಸ್ ವೇಗೆ ಚಾರ್ಟರ್ ವಿಮಾನವೊಂದು ಪತನಗೊಂಡ ನಂತರ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ.
ಲಂಕಾವಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಸುಲ್ತಾನ್ ಅಬ್ದುಲ್ ಅಜೀಜ್ ಷಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಆರು ಪ್ರಯಾಣಿಕರು ಮತ್ತು ಇಬ್ಬರು ವಿಮಾನ ಸಿಬ್ಬಂದಿ ಇದ್ದರು ಎಂದು ಮಲೇಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಹೇಳಿದೆ.
ಸುಬಾಂಗ್ ಏರ್ ಟ್ರಾಫಿಕ್ ಕಂಟ್ರೋಲ್ ಟವರ್ ನೊಂದಿಗೆ ವಿಮಾನ ಮೊದಲ ಸಂಪರ್ಕ ಪಡೆದು ಮಧ್ಯಾಹ್ನ 2:48 ಕ್ಕೆ ಲ್ಯಾಂಡಿಂಗ್ ಕ್ಲಿಯರೆನ್ಸ್ ನೀಡಲಾಯಿತು. ಮಧ್ಯಾಹ್ನ 2:51 ಕ್ಕೆ(ಸ್ಥಳೀಯ ಕಾಲಮಾನ) ಅಪಘಾತದ ಸ್ಥಳದಿಂದ ಹೊಗೆ ಹೊರಹೊಮ್ಮುತ್ತಿರುವುದನ್ನು ಕಂಟ್ರೋಲ್ ಟವರ್ ಗಮನಿಸಿದೆ ಎಂದು ಹೇಳಿದೆ.
ವಿಮಾನವು ಕಾರ್ ಮತ್ತು ಮೋಟಾರ್ ಸೈಕಲ್‌ಗೆ ಅಪ್ಪಳಿಸಿದೆ. ಫೊರೆನ್ಸಿಕ್ ಸಿಬ್ಬಂದಿಗಳು ಅವಶೇಷಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿದ್ದಾರೆ ಮತ್ತು ಮರಣೋತ್ತರ ಪರೀಕ್ಷೆ ಮತ್ತು ಗುರುತಿನ ಪ್ರಕ್ರಿಯೆಗಾಗಿ ಮೃತದೇಹಗಳನ್ನು ಕ್ಲಾಂಗ್ ನಲ್ಲಿರುವ ತೆಂಗು ಅಂಪುವಾನ್ ರಹಿಮಾ ಆಸ್ಪತ್ರೆಗೆ ತರಲಿದ್ದಾರೆ. ಅಪಘಾತದ ದೃಶ್ಯಗಳು ಸೆರೆಯಾದ ವಿಡಿಯೊಗಳು ವೈರಲ್ ಆಗಿವೆ.
https://twitter.com/11O12OO2/status/1692144181697982956