ಕೂದಲು ಹೈಡ್ರೇಟ್ ಆಗಲು ಅಗಸೆ ಬೀಜ ಉತ್ತಮವಾಗಿದೆ. ಇದು ಕೂದಲಿಗೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ಅಗಸೆ ಬೀಜಗಳಿಂದ ಜೆಲ್ ತಯಾರಿಸಿ ಬಳಸಿ, ಅದನ್ನು ತಯಾರಿಸುವ ವಿಧಾನ ಇಲ್ಲಿದೆ.
¼ ಕಪ್ ಅಗಸೆ ಬೀಜ, 2.5 ಕಪ್ ನೀರನ್ನು ಮಿಕ್ಸ್ ಮಾಡಿ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲೆ ಇಡಿ. 10 ನಿಮಿಷಗಳ ಕಾಲ ಕುದಿಸಿ, ಅಗಸೆ ಬೀಜ ಜೆಲ್ ಸ್ಥಿರತೆಗೆ ಬರುವವರೆಗೂ ಕುದಿಸಿ. ಬಳಿಕ ತಣ್ಣಗಾಗಲು ಬಿಡಿ. ಆಗ ಜೆಲ್ ಸಿಗುತ್ತದೆ. ಅದನ್ನು ಒಂದು ಗಾಜಿನ ಬಾಟಲಿನಲ್ಲಿ ಹಾಕಿ ಸ್ಟೋರ್ ಮಾಡಿ ಇಡಿ.
ನಿಮ್ಮ ಕೂದಲು ಆರೋಗ್ಯವಾಗಿ ಹೊಳೆಯುತ್ತಿರಲು ಸ್ವಲ್ಪ ಅಲೋವೆರಾ ಜೆಲ್ ನ್ನು ಮಿಕ್ಸ್ ಮಾಡಿ ಬಳಸಿ. ಒಂದು ವೇಳೆ ನೆತ್ತಿಯ ತುರಿಕೆ ಕಡಿಮೆ ಮಾಡಲು ಆ ಜೆಲ್ ಗೆ ಟೀ ಟ್ರೀ ಆಯಿಲ್ ಅಥವಾ ಲ್ಯಾವೆಂಡರ್ ಆಯಿಲ್ ಮಿಕ್ಸ್ ಮಾಡಿ ಬಳಸಿ. ಇದನ್ನು ಕೂದಲ ಮಾಯಿಶ್ಚರೈಸರ್ ಆಗಿಯೂ ಬಳಸಬಹುದು.