ಮಹೀಂದ್ರ ಥಾರ್ ಅಥವಾ ಮಾರುತಿ ಜಿಮ್ನಿ ಯಾವುದು ಗ್ರಾಹಕರ ಫೇವರಿಟ್‌ ? ಇಲ್ಲಿದೆ ಮಾಹಿತಿ

ಈ ವರ್ಷ ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿ ವಾಹನಗಳು ಲಗ್ಗೆ ಇಟ್ಟಿವೆ. ಜೂನ್‌ನಲ್ಲಿ ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ ಬಿಡುಗಡೆಯಾಗಿತ್ತು. ಮಾರುತಿ ಜಿಮ್ನಿಗೆ ಕಠಿಣ ಸ್ಪರ್ಧೆ ಒಡ್ಡುತ್ತಿದೆ ಮಹೀಂದ್ರ ಥಾರ್‌. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನ ಮಾರಾಟದ ಮಾಹಿತಿಯು ಪ್ರಕಾರ ಆಫ್‌ ರೋಡಿಂಗ್‌ ವಾಹನಗಳನ್ನು ಇಷ್ಟಪಡುವವರಿಗೆಲ್ಲ ಮಹೀಂದ್ರ ಥಾರ್ ಫೇವರಿಟ್‌ ಅನ್ನೋದು ಸಾಬೀತಾಗಿದೆ.

ಆಗಸ್ಟ್‌ನಲ್ಲಿ 5,951 ಯುನಿಟ್ ಥಾರ್ ಮಾರಾಟವಾಗಿದ್ದರೆ, 3,104 ಯೂನಿಟ್ ಜಿಮ್ನಿ ಮಾರಾಟವಾಗಿದೆ. ಸೆಪ್ಟೆಂಬರ್‌ನಲ್ಲಿ ಮಹೀಂದ್ರ ಥಾರ್‌ನ 5,417 ಯುನಿಟ್‌ಗಳು ಹಾಗೂ ಮಾರುತಿ ಜಿಮ್ನಿಯ 2,651 ಯೂನಿಟ್‌ಗಳು ಸೇಲ್‌ ಆಗಿವೆ. ಇನ್ನು ಅಕ್ಟೋಬರ್‌ನಲ್ಲಿ 5,593 ಥಾರ್‌ ಬಿಕರಿಯಾಗಿದ್ದು, ಜಿಮ್ನಿಯ ಕೇವಲ 1,852 ಯುನಿಟ್‌ಗಳು ಮಾರಾಟವಾಗಿವೆ.

ಈ ಅಂಕಿ-ಅಂಶಗಳಿಂದ ಜಿಮ್ನಿಯ ಮಾರಾಟವು ನಿರಂತರವಾಗಿ ಕಡಿಮೆಯಾಗುತ್ತಿದೆ ಎಂಬುದು ಸ್ಪಷ್ಟ. ಥಾರ್ ಮಾರಾಟವು ನಿರಂತರವಾಗಿ 5 ಸಾವಿರ ಯೂನಿಟ್‌ಗಳಿಗಿಂತ ಹೆಚ್ಚಿದೆ. ಆದಾಗ್ಯೂ ಮಹೀಂದ್ರ ಥಾರ್‌ನ ನವೀಕರಿಸಿದ ಆವೃತ್ತಿ ಇನ್ನೂ ರಸ್ತೆಗಿಳಿದಿಲ್ಲ. ಅದು 2024ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ಜಿಮ್ನಿಯಂತೆ 5-ಬಾಗಿಲಿನ ಆವೃತ್ತಿಯಾಗಿದೆ.

ಮಾರುತಿ ಸುಜುಕಿ ಜಿಮ್ನಿಯ ಬೆಲೆ 12.74 ಲಕ್ಷ ರೂಪಾಯಿಯಿಂದ ಆರಂಭವಾಗಿ 15.05 ಲಕ್ಷದವರೆಗಿದೆ. ಇದು ಝೀಟಾ ಮತ್ತು ಆಲ್ಫಾ ಎಂಬ ಎರಡು ರೂಪಾಂತರಗಳಲ್ಲಿ ಬರುತ್ತದೆ. ಎರಡು ಡ್ಯುಯಲ್ ಟೋನ್ ಮತ್ತು 5 ಸಿಂಗಲ್ಟೋನ್ ಕಲರ್ ಶೇಡ್‌ಗಳು ಇದರಲ್ಲಿ ಲಭ್ಯವಿವೆ. ಈ 5-ಬಾಗಿಲಿನ ಆಫ್-ರೋಡಿಂಗ್ ಕಾರಿನಲ್ಲಿ 4 ಜನರು ಕುಳಿತುಕೊಳ್ಳಬಹುದು. ಇದರ ಗ್ರೌಂಡ್ ಕ್ಲಿಯರೆನ್ಸ್ 210 ಎಂಎಂ. ಇದು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಇನ್ನು ಮಹೀಂದ್ರ ಥಾರ್ ಬೆಲೆ 10.98 ಲಕ್ಷದಿಂದ ಆರಂಭವಾಗಿ 16.94 ಲಕ್ಷದವರೆಗಿದೆ. ಇದು ಮೂರು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: 2-ಲೀಟರ್ ಟರ್ಬೊ ಪೆಟ್ರೋಲ್, 2.2-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಡೀಸೆಲ್. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಇದರಲ್ಲಿದೆ. ಆದರೆ 6-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್, 2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್‌ಗಳೊಂದಿಗೆ ಆಯ್ಕೆಯಾಗಿ ಲಭ್ಯವಿದೆ.

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read