
ಮುಂಬೈ: ಮಾಜಿ ಪತ್ನಿ ಪ್ರಿಯಕರನೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿದ್ದ, ಖಾಸಗಿ ಕ್ಷಣಗಳ ವಿಡಿಯೋ ಮಾಡಿದ್ದ ಮಾಜಿ ಪತಿಮಹಾಶಯ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಘಟನೆ ಮಹಾರಾಷ್ಟ್ರದ ಥಾಣೆಯ ದೋಂಬಿವಲಿಯಲ್ಲಿ ನಡೆದಿದೆ.
ಮಹಿಳೆ ಪ್ರಿಯಕರನೊಂದಿಗೆ ಇರುವುದನ್ನು ರಹಸ್ಯವಾಗಿ ಆಕೆಯ ಮಾಜಿ ಪತಿ ಚಿತ್ರೀಕರಿಸಿದ್ದಾನೆ. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿ ವಿಕೃತಿ ಮೆರೆದಿದ್ದಾನೆ.
ಮಾಜಿ ಪತಿಯ ನೀಚ ಕೃತ್ಯ ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಆರೋಪಿ ಮಹಿಳೆಯ ಮನೆಯಲ್ಲಿ ಆಕೆಗೆ ಗೊತ್ತಾಗದೇ ರಹಸ್ಯ ಕ್ಯಾಮರಾ ಅಳವಡಿಸಿದ್ದ. ಇದರಿಂದ ವಿಡಿಯೋ ಚಿತ್ರೀಕರಿಸಿದ್ದಾನೆ. ಮಹಿಳೆ ನೀಡಿದ ದೂರಿನ ಮೇರೆಗೆ ವಿಚ್ಛೇದಿತ ಪತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಮಾನನಷ್ಟ ಕೊಮದ್ದಮೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.