ಈ ಬಾರಿ ಮಹಾರಾಜ ಟ್ರೋಪಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದ್ದು ಕೊನೆಯ ಘಟ್ಟಕ್ಕೆ ತಲುಪಿದೆ.
ಇಂದು ನಡೆಯಲಿರುವ ಕೊನೆಯ ಎರಡು ಪಂದ್ಯಗಳು ಸೆಮಿ ಫೈನಲ್ ಪ್ರವೇಶಿಸುವ ತಂಡಗಳನ್ನು ನಿರ್ಧರಿಸಲಿವೆ. ಹುಬ್ಬಳ್ಳಿ ಟೈಗರ್ಸ್ ಹಾಗೂ ಮೈಸೂರು ವಾರಿಯರ್ಸ್ ಈಗಾಗಲೇ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿವೆ. ಇನ್ನುಳಿದ ನಾಲ್ಕು ತಂಡಗಳಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಗೆ ಸೆಮಿ ಫೈನಲ್ ಗೆ ಬರುವ ಯಾವುದೇ ಅವಕಾಶವಿಲ್ಲದೆ ಇದ್ದರು ತಮ್ಮ ಕೊನೆಯ ಪಂದ್ಯವನ್ನು ಇಂದು ಎಂಜಾಯ್ ಮಾಡಲಿದ್ದಾರೆ.
ಗುಲ್ಬರ್ಗ ಮೈಸ್ಟಿಕ್ಸ್ ಈಗಾಗಲೇ ಐದು ಪಂದ್ಯಗಳಲ್ಲಿ ಗೆದ್ದು ಹತ್ತು ಅಂಕಗಳನ್ನು ಗಳಿಸಿದ್ದು, ಇಂದಿನ ಪಂದ್ಯ ಗೆದ್ದರೆ ಯಾವುದೇ ಭಯವಿಲ್ಲದೆ ಸೆಮಿ ಫೈನಲ್ ಗೆ ಎಂಟ್ರಿ ಕೊಡಲಿದೆ. ಇನ್ನುಳಿದ ಶಿವಮೊಗ್ಗ ಲಯನ್ಸ್ ಮತ್ತು ಮಂಗಳೂರು ಡ್ರಾಗನ್ಸ್ ತಲಾ ನಾಲ್ಕು ಪಂದ್ಯಗಳನ್ನು ಗೆದ್ದು ಎಂಟು ಅಂಕ ಗಳಿಸಿದ್ದು, ಈ ಎರಡು ತಂಡಗಳು ಇಂದು ಜಯ ಸಾಧಿಸಿದರೆ ರನ್ ರೇಟ್ ಆಧಾರದ ಮೇಲೆ ಸೆಮಿ ಫೈನಲ್ ಪ್ರವೇಶಿಸುವ ಅವಕಾಶವಿದೆ.
ಇಂದಿನ ಮೊದಲ ಪಂದ್ಯದಲ್ಲಿ ಗುಲ್ಬರ್ಗ ಮೈಸ್ಟಿಕ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್ ಮುಖಾಮುಖಿಯಾಗುತ್ತಿದ್ದು, ಎರಡನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಶಿವಮೊಗ್ಗ ಲಯನ್ಸ್ ಸೆಣಸಾಡಲಿವೆ. ನಾಳೆಯೇ ಸೆಮಿ ಫೈನಲ್ ಪಂದ್ಯಗಳಿದ್ದು ಆ. 29ಕ್ಕೆ ಫೈನಲ್ ನಡೆಯಲಿದೆ.