ಮನೆಗಳ್ಳರಿಗೆ ಸಾಥ್ ನೀಡುತ್ತಿದ್ದ ಪೊಲೀಸ್ ಸೇರಿ 8 ಮಂದಿ ಅರೆಸ್ಟ್

ಮಂಡ್ಯ: ಮನೆಗಳ್ಳರಿಗೆ ಸಹಾಯ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ ಸ್ಟೆಬಲ್ ಸೇರಿ 8 ಆರೋಪಿಗಳನ್ನು ಮಂಡ್ಯ ಜಿಲ್ಲೆಯ ಮದ್ದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮದ್ದೂರು ತಾಲೂಕಿನ ಕೊಪ್ಪ ಠಾಣೆಯ ಕಾನ್ ಸ್ಟೆಬಲ್ ಕೆಂಡಗಣ್ಣಯ್ಯ, ಡಾಲಿ, ಭುವನ್, ಸಾಧನ್, ಅಯೂಬ್, ಮುನ್ನ, ಪ್ರಸಾದ್ ಸೇರಿ 8 ಮಂದಿ ಬಂಧಿಸಲಾಗಿದೆ. ಬಂಧಿತರಿಂದ 1 ಕೆಜಿ 486 ಗ್ರಾಂ ಚಿನ್ನಾಭರಣ, 1.70 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.

ಕಳೆದ ತಿಂಗಳು ವೈದ್ಯ ಚಂದ್ರು ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಒಂದು ಕೆಜಿ ಚಿನ್ನಾಭರಣ, 8 ಲಕ್ಷ ರೂಪಾಯಿ ನಗದು ದೋಚಿದ್ದರು. ಬಂಧಿತ 8 ಆರೋಪಿಗಳಿಂದ 5 ಮನೆಗಳ್ಳತನ ಪ್ರಕರಣಗಳು ಬಯಲಿಗೆ ಬಂದಿದೆ. ಆರೋಪಿಗಳಿಗೆ ಪಿಸಿ ಕೆಂಡಗಣ್ಣಯ್ಯ ಸಾಥ್ ನೀಡುತ್ತಿದ್ದ. ಆರೋಪಿಗಳು ಕದ್ದ ಚಿನ್ನಾಭರಣವನ್ನು ಅಡವಿಟ್ಟು ಕೊಡುತ್ತಿದ್ದ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read