ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್, ಸೊಸೆ ರೇವತಿ ಜೊತೆ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
ಮತದಾನದ ಬಳಿಕ ಸುದ್ದಿಗರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರು ಚುನಾವಣೆ ವೇಲೆಯಲ್ಲಿಯೂ ಗಿಫ್ಟ್ ಕಾರ್ಡ್ ಗಳನ್ನು ಹಂಚುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾದರಿಗೆ ಆಮಿಷವೊಡ್ಡಲಾಗುತ್ತಿದೆ ಎಂದು ಆರೋಪಿಸಿದರು.
ಮತದಾರರಿಗೆ ಅವ್ಯಾಹತವಾಗಿ ಆಮಿಷವೊಡ್ಡಲಾಗುತ್ತಿದೆ. ಹಲವು ರೀತಿಯ ಗಿಫ್ಟ್ ಕಾರ್ಡ್ ಗಳನ್ನು ಕಾಂಗ್ರೆಸ್ ನವರು ಹಂಚುತ್ತಿದ್ದಾರೆ ಎಂದು ಗಿಫ್ಟ್ ಕಾರ್ಡ್ ಗಳನ್ನು ಪ್ರದರ್ಶಿಸಿದರು. ಹತ್ತು ಸಾವಿರ ರೂಪಾಯಿಗಳ ಗಿಫ್ಟ್ ಕಾರ್ಡ್ ಗಳನ್ನು ಮತದಾರರಿಗೆ ಹಂಚುತ್ತಿದ್ದಾರೆ ಎಂದರು.
ಚುನಾವಣಾ ಆಯೋಗ ಹೀಗೆ ಚುನವಣೆ ನಡೆಸುವ ಬದಲು ಮತದಾರರಿಗೆ ಹಣ ನೀಡಿ ವೋಟ್ ಹಾಕಿಸುವ ಪದ್ಧತಿ ಜಾರಿಗೆ ತರಬೇಕು ಎಂದು ವಾಗ್ದಾಳಿ ನಡೆಸಿದರು.