ಚಿನ್ನದ ಹರಾಜಿನಲ್ಲಿ ಲೋಪ: ಮುತ್ತೂಟ್ ಫೈನಾನ್ಸ್ ಗೆ ದಂಡ

ಧಾರವಾಡ: ಚಿನ್ನದ ಹರಾಜಿನಲ್ಲಿ ತಪ್ಪೆಸಗಿದ ಮೂತ್ತೂಟ್ ಫೈನಾನ್ಸ್‍ ಗೆ ದಂಡ ವಿಧಿಸಿ, ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶಿಸಿದೆ.

ಧಾರವಾಡದ ಮಾಳಮಡ್ಡಿಯ ನಿವಾಸಿಯಾದ ಬಸವೇಶ ಕುಂಬಾರ ಇವರು ಎದುರುದಾರರ ಫೈನಾನ್ಸ್‍ ನಲ್ಲಿ ತಮ್ಮ ಬಂಗಾರದ ಬಳೆ(7.3ಗ್ರಾಂ.) ಒತ್ತೆ ಇಟ್ಟು 24,000 ರೂ. ವೈಯಕ್ತಿಕ ಸಾಲವನ್ನು ಒಂದು ವರ್ಷದ ಅವಧಿಗೆ ಪಡೆದಿದ್ದರು. ಕೆಲವು ಕಾರಣಗಳಿಂದ ಆ ಹಣವನ್ನು ಪಾವತಿ ಮಾಡದೇ ಇರುವುದರಿಂದ ಎದುರುದಾರರು ಆ ಚಿನ್ನವನ್ನು ಹರಾಜಿಗೆ ಹಾಕುವುದಾಗಿ ದೂರುದಾರರಿಗೆ ಹರಾಜು ನೋಟಿಸುಗಳನ್ನು ಕಳಿಸಿದ್ದರು.

ದೂರುದಾರರು ಆ ಹರಾಜಿನ ದಿನ ಹಾಜರಿದ್ದರು. ಒಂದಿಲ್ಲೊಂದು ನೆಪ ಹೇಳಿ ಹರಾಜಿನ ದಿನವನ್ನು ಎದುರುದಾರರು ಮೂಂದೂಡಿರುತ್ತಾರೆ. ಕೊನೆಗೆ ಎದುರುದಾರರು ಸದರಿ ಬಂಗಾರದ ಬಳೆಯನ್ನು ಹರಾಜಿಗೆ ಇಟ್ಟಿದ್ದು, ಅಂದಿನ ಬಂಗಾರದ ಬೆಲೆಯ ಪ್ರಕಾರ ಅದರ ಹರಾಜಿನ ಮೊತ್ತ 44,760 ರೂ.ಆಗಿರುತ್ತದೆ. ಎದುರುದಾರರ ಅಸಲು ಹಣದ ಜೊತೆಗೆ ಬಡ್ಡಿ ಸೇರಿಸಿದರೆ ಒಟ್ಟು38,940 ರೂ.ಆಗಿದ್ದು, ಬಾಕಿ ಹಣ 5,820 ರೂ. ತನಗೆ ಕೊಡಬೇಕೆಂದು ದೂರುದಾರರು ಸಾಕಷ್ಟು ಸಲ ಎದುರುದಾರರಿಗೆ ವಿನಂತಿಸಿದರೂ ಅವರು ಬಾಕಿ ಹಣವನ್ನು ದೂರುದಾರರಿಗೆ ನೀಡಿರುವುದಿಲ್ಲ. ಅಂತಹ ಎದುರುದಾರ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ದಿ:05/02/2024ರಂದು ಎದುರುದಾರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಆಯೋಗಕ್ಕೆ ಈ ದೂರು ಸಲ್ಲಿಸಿದ್ದರು.

ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ ಅವರು ದೂರುದಾರರು ಪಿರ್ಯಾದಿಗೆ ಎದುರುದಾರರು ಹಾಜರಾಗಿ ತಮ್ಮ ಆಕ್ಷೇಪಣೆಯನ್ನು ಹಾಕಿರುವುದಿಲ್ಲ. ದೂರುದಾರರು ಕೊಟ್ಟಂತಹ ದಾಖಲೆಗಳನ್ನು ಪರಿಶೀಲಿಸಿದಾಗ ದೂರುದಾರರು ಎದುರುದಾರರ ಪೈನಾನ್ಸ್ ಕಂಪನಿಯಲ್ಲಿ ಬಂಗಾರದ ಬಳೆಗಳನ್ನು ಅಡವಿಟ್ಟು ಹಣ ಪಡೆದಿರುವುದು ಕಂಡು ಬಂದಿರುತ್ತದೆ.

ಅಲ್ಲದೇ ಆ ಎದುರುದಾರರ ಹರಾಜಿನ ನೋಟಿಸಿಗೆ ದೂರುದಾರರು ಹೋಗಿರುವುದು ಮತ್ತು ದೂರುದಾರರು ಹಣ ಪಾವತಿಸದೇ ಅವರ ಬಳೆಗಳನ್ನು ಹರಾಜಿಗೆ ಹಚ್ಚಿರುವುದು ಮತ್ತು ಅದರ ಬೆಲೆ 44,760 ಆಗಿರುವುದು ದಾಖಲೆಗಳ ಮುಖಾಂತರ ಕಂಡುಬಂದಿರುತ್ತದೆ. ದೂರುದಾರರು ದಾಖಲಿಸಿದ 1981 ರಿಂದ 2024 ರವರೆಗಿನ ಬಂಗಾರದ ಬೆಲೆಯ ಡಾಟಾವನ್ನು ಅವಲೋಕಿಸಿದಾಗ, ಹರಾಜಿನ ಸಮಯದಲ್ಲಿ ಬಂಗಾರದ ಮೊತ್ತ 10 ಗ್ರಾಂ. ಗೆ 65,330 ಬೆಲೆ ಇರುತ್ತದೆ. ಅದರಂತೆ ದೂರುದಾರರ ಬಂಗಾರದ ತೂಕ 7.3 ಗ್ರಾಂ ಇದ್ದು ಅದರ ಬೆಲೆ 44,760 ಆಗಿರುತ್ತದೆ.

ಅಲ್ಲದೇ ದೂರುದಾರರು ಅಸಲು ಹಣ ಮತ್ತು ಬಡ್ಡಿ ಸೇರಿಸಿದರೆ ಒಟ್ಟು 38,440 ರೂ.ಇದ್ದು ಬಾಕಿ ಹರಾಜಿನ ಹಣ 5,820 ರೂ.ಎದುರುದಾರರ ಬಳಿಯೇ ಉಳಿದಿದ್ದು ಅದನ್ನು ದೂರುದಾರರಿಗೆ ಕೊಡದೇ ಸೇವಾ ನ್ಯೂನ್ಯತೆ ಎಸಗಿರುವುದು ಕಂಡುಬಂದು, ಎದುರುದಾರರು ವ್ಯತ್ಯಾಸ ಹಣ 5,820 ರೂ.ಹಣವನ್ನು ದಿ:24/11/2023 ಶೇ10% ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಕೊಡಬೇಕು ಮತ್ತು ಅವರಿಗೆ ಆಗಿರುವ ಮಾನಸಿಕ ತೊಂದರೆ ಅನಾನುಕೂಲತೆಗೆ 25,000 ರೂ. ಪರಿಹಾರ ಮತ್ತು 10,000 ರೂ. ಪ್ರಕರಣದ ಖರ್ಚು ವೆಚ್ಚ ಕೊಡಲು ಆಯೋಗ ಮೂತ್ತೂಟ್ ಪೈನಾನ್ಸ್ ಗೆ ಆಯೋಗ ನಿರ್ದೇಶಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read