ಕಾರ್ ಹಾರ್ನ್ ಕೇಳಿದ ತಕ್ಷಣ ಭಯಗೊಂಡು ಕೈಯಲ್ಲಿದ್ದ ಐಸ್ ಕ್ರೀಂ ಬಿಸಾಡಿದ ಬಾಲಕಿ; ಮನಗೆದ್ದ ಕ್ಯೂಟ್ ವಿಡಿಯೋ

ನಮ್ಮ ಮುಖದಲ್ಲಿ ನಗು ತರಿಸುವ ವೀಡಿಯೊಗಳಿಂದ ಇಂದು ಇಂಟರ್ನೆಟ್ ತುಂಬಿದೆ. ಇತ್ತೀಚಿಗೆ ಪುಟ್ಟ ಬಾಲಕಿಯೊಬ್ಬಳು ಐಸ್ ಕ್ರೀಂ ತಿನ್ನುವಾಗ ಜೋರಾಗಿ ಕಾರ್ ಹಾರ್ನ್ ಕೇಳಿ ಗಾಬರಿಯಾದ ವಿಡಿಯೋ ವೈರಲ್ ಆಗಿದೆ.

ಶಾಲೆಯ ಬ್ಯಾಗನ್ನು ಬೆನ್ನ ಹಿಂದೆ ನೇತು ಹಾಕಿಕೊಂಡು ರಸ್ತೆಯಲ್ಲಿ ಹೋಗುತ್ತಿರುವಾಗ ಬಾಲಕಿ ಸಂತೋಷದಿಂದ ಐಸ್ ಕ್ರೀಂ ತಿನ್ನುತ್ತಿರುವುದು ಕಾಣಿಸುತ್ತದೆ.

ಆದರೆ ಹತ್ತಿರ ಬಂದ ಕಾರ್ ಕರ್ಕಶವಾದ ಹಾರ್ನ್‌ ಮಾಡುತ್ತಿದ್ದಂತೆ ಬಾಲಕಿ ಗಾಬರಿಗೊಂಡು ಕೈಯಲ್ಲಿದ್ದ ಐಸ್ ಕ್ರೀಂ ಬಿಸಾಡಿ ಹೆದರಿಕೊಂಡವಳಂತೆ ಶಬ್ದ ಬಂದ ಕಾರ್ ಕಡೆಯೇ ದಿಟ್ಟಿಸಿ ನೋಡುತ್ತಾಳೆ.

ಹುಡುಗಿಯ ಮುದ್ದಾಗಿರುವ ಅಭಿವ್ಯಕ್ತಿ ನೆಟ್ಟಿಗರ ಮನ ಸೆಳೆದಿದೆ. ಈ ವಿಡಿಯೋ 3 ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಎಂತಹ ಉತ್ತಮ ನೋಟ ಎಂದು ಬಣ್ಣಿಸಿದ್ದಾರೆ.

https://youtu.be/yZQO_49gKGc

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read