alex Certify ಈ ಸಮಸ್ಯೆಗಳನ್ನು ನಿವಾರಿಸುತ್ತೆ ನಿಂಬೆ ಹಣ್ಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಮಸ್ಯೆಗಳನ್ನು ನಿವಾರಿಸುತ್ತೆ ನಿಂಬೆ ಹಣ್ಣು

ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದರಿಂದ ಹಲವು ರೋಗಗಳನ್ನು ನಿವಾರಿಸಬಹುದು. ಹಾಗಾಗಿ ನಿಂಬೆ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ತುಂಬಾ ಉತ್ತಮ. ಹಾಗಾಗಿ ನಿಂಬೆ ಹಣ್ಣನ್ನು ಬಳಸಿ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

*ಇದು ಜೀರ್ಣಕ್ರಿಯೆಗೆ ಉತ್ತಮ. ಇದು ಪಿತ್ತಜನಕಾಂಗವನ್ನು ಉತ್ತೇಜಿಸುತ್ತದೆ. ಇದರಿಂದ ಜೀರ್ಣಾಂಗದಲ್ಲಿರುವ ವಿಷ ಹೊರಹೋಗುತ್ತದೆ.

*ನಿಂಬೆ ಹಣ್ಣನ್ನು ಸೊಳ್ಳೆ ನಿವಾರಕವಾಗಿ ಬಳಸಬಹುದು. ಅದಕ್ಕೆ ಲವಂಗ ಸೇರಿಸಿ ಬಳಿಯಲ್ಲಿ ಇಟ್ಟುಕೊಳ್ಳುವುದರಿಂದ ಸೊಳ್ಳೆ ಕಡಿತದಿಂದ ಮುಕ್ತಿ ಹೊಂದಬಹುದು.

* ಕತ್ತರಿಸಿದ ಹಣ್ಣ ನ್ನು ತಾಜಾವಾಗಿರಿಸಲು ನಿಂಬೆ ಹಣ್ಣು ಸಹಕಾರಿ. ಕತ್ತರಿಸಿದ ಸೇಬು, ಆವಕಾಡೊ, ಆಲೂಗಡ್ಡೆ ಕಪ್ಪಾಗಬಾರದಂತಿದ್ದರೆ ನಿಂಬೆ ರಸವನ್ನು ಹಚ್ಚಿಡಿ. ಇದರಿಂದ ಅವು ತಾಜಾವಾಗಿರುತ್ತವೆ.

*ನೀವು ತರಕಾರಿ ಕತ್ತರಿಸುವ ಬೋರ್ಡ್ ಗಳನ್ನು ಕ್ಲೀನ್ ಮಾಡಲು ನಿಂಬೆ ಬಳಸಬಹುದು. ಇದು ಅದರಲ್ಲಿ ಸೇರಿಕೊಂಡಿರುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...