ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ಲಡ್ಡು ಪಡೆಯಲು ಆಧಾರ್ ಕಾರ್ಡ್ ಹಾಜರುಪಡಿಸುವುದು ಕಡ್ಡಾಯವಾಗಿದೆ.
ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯಕ್ಕೆ ಬರುವ ಭಕ್ತರು ದೇವರ ದರ್ಶನದ ಟೋಕನ್ ಇಲ್ಲದವರು ಲಡ್ಡು ಪಡೆದುಕೊಳ್ಳಲು ಆಧಾರ್ ಕಾರ್ಡ್ ತೋರಿಸಬೇಕಾಗುತ್ತದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲ ರಾವ್ ತಿಳಿಸಿದ್ದಾರೆ.
ತಿರುಪತಿ ದೇವಾಲಯದಲ್ಲಿ ದರ್ಶನ ಪಡೆದ ಎಲ್ಲ ಭಕ್ತರಿಗೆ ಪ್ರಸಾದ ರೂಪದಲ್ಲಿ ಲಡ್ಡು ವಿತರಿಸಲಾಗುವುದು. ಆಧಾರ್ ಕಾರ್ಡ್ ಹಾಜರುಪಡಿಸಿದವರಿಗೆ ಎರಡು ಲಡ್ಡುಗಳನ್ನು ನೀಡುವ ಹೊಸ ನಿಯಮ ಜಾರಿಯಾಗಿದೆ. ಸ್ವಾಮಿಯ ದರ್ಶನ ಪಡೆಯದೆ ನೇರವಾಗಿ ಲಡ್ಡು ಕೌಂಟರ್ ಗೆ ತೆರಳುವ ಭಕ್ತರು ಆಧಾರ್ ಕಾರ್ಡ್ ಹಾಜರುಪಡಿಸಿ ಎರಡು ಲಡ್ಡು ಪಡೆಯಬಹುದು. ಟಿಟಿಡಿ ಸಂಯೋಜಿತ ದೇವಸ್ಥಾನಗಳು ಮತ್ತು ಮಾಹಿತಿ ಕೇಂದ್ರಗಳಲ್ಲಿ ಕೂಡ ಲಡ್ಡು ಲಭ್ಯವಿರುತ್ತದೆ. ದಲ್ಲಾಳಿಗಳ ಹಾವಳಿ ತಪ್ಪಿಸಲು ಹೊಸ ನಿಯಮ ರೂಪಿಸಲಾಗಿದೆ ಎಂದು ಹೇಳಲಾಗಿದೆ.