ಲಡಾಖ್ ನ ಕಾರ್ಗಿಲ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಶಿಲಿಕ್ ಚೇ ಬೈಪಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಕಾರ್ಗಿಲ್ ನಿಂದ ಡ್ರಾಸ್‌ಗೆ ಹೋಗುತ್ತಿದ್ದ ಟಿಪ್ಪರ್ ಮತ್ತು ಸ್ಕಾರ್ಪಿಯೋ ಶಿಲಿಕ್ ಚೇ ಸಂಚಾರ ನಿಯಂತ್ರಣ ಬಿಂದು(ಟಿಸಿಪಿ) ಬಳಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ಪರಿಣಾಮವಾಗಿ ಐದು ಜನರು ಸಾವನ್ನಪ್ಪಿದ್ದು, ಎರಡೂ ವಾಹನಗಳು ಆಳವಾದ ಕಂದಕಕ್ಕೆ ಉರುಳಿವೆ.
ಮೃತರನ್ನು ಸ್ಟಕ್ಪಾದ ಮುಹಮ್ಮದ್ ಹುಸೇನ್ ಅವರ ಪುತ್ರ ಮುಹಮ್ಮದ್ ಹಸನ್; ಚೋಸ್ಕೋರ್‌ನ ಎಕೆ ರಜಾ ಅವರ ಪುತ್ರ ಲಿಯಾಕತ್ ಅಲಿ, ಬದ್ಗಾಮ್‌ನ ಹಾಜಿ ಮುಹಮ್ಮದ್ ಅವರ ಪುತ್ರ ಮುಹಮ್ಮದ್ ಇಬ್ರಾಹಿಂ ಎಂದು ಅಧಿಕಾರಿಗಳು ಗುರುತಿಸಿಸಿದ್ದಾರೆ. ಉಳಿದ ಇಬ್ಬರು ಮೃತರನ್ನು ಇನ್ನೂ ಗುರುತಿಸಲಾಗಿಲ್ಲ.
ತುರ್ತು ಸಿಬ್ಬಂದಿ ತ್ವರಿತವಾಗಿ ಪ್ರದೇಶಕ್ಕೆ ಧಾವಿಸಿ ಸಂತ್ರಸ್ತರನ್ನು ಡ್ರಾಸ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ.