ಕೆಲಸದ ವೇಳೆಯಲ್ಲೇ ಘೋರ ದುರಂತ: ನಿರ್ಮಾಣ ಹಂತದ ವಿದ್ಯುತ್ ಘಟಕದ ಕಾಂಪೌಂಡ್ ಕುಸಿದು ಕಾರ್ಮಿಕ ಸಾವು

ವಿಜಯಪುರ: ನಿರ್ಮಾಣ ಹಂತದ ಕಾಂಪೌಂಡ್ ಕುಸಿದು ಕಾರ್ಮಿಕ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದಲ್ಲಿ ನಡೆದಿದೆ.

ಜಟ್ಟಗಿ ಗ್ರಾಮದಲ್ಲಿ ವಿದ್ಯುತ್ ಘಟಕ ನಿರ್ಮಿಸುತ್ತಿದ್ದು, ಅದರ ಕಾಂಪೌಂಡ್ ಕುಸಿದು ದುರಂತ ಸಂಭವಿಸಿದೆ. ಕಾರ್ಮಿಕ ಬಸಲಿಂಗಯ್ಯ ಶಾಸ್ತ್ರಿ ಮೃತಪಟ್ಟವರು ಎಂದು ಹೇಳಲಾಗಿದೆ.

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ನಿವಾಸಿ ಬಸಲಿಂಗಯ್ಯ ಕಾಮಗಾರಿ ವೇಳೆ ಸಾವನ್ನಪ್ಪಿದ್ದಾರೆ. ಕಳಪೆ ಕಾಮಗಾರಿಯೇ ಘಟನೆಗೆ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಮುದ್ದೇಬಿಹಾಳ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾರ್ಮಿಕನ ಶವ ಹೊರಗೆ ತೆಗೆದಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read