ಪ್ರವಾಸಿಗರಿಗೆ ಸಿಹಿ ಸುದ್ದಿ: ಕೆಎಸ್ಆರ್ಟಿಸಿಯಿಂದ ದಸರಾ ಪ್ಯಾಕೇಜ್ ಟೂರ್

ಬೆಂಗಳೂರು: ನಾಡಹಬ್ಬ ದಸರಾ ಅಂಗವಾಗಿ ಕೆಎಸ್ಆರ್ಟಿಸಿ ಒಂದು ದಿನದ ದಸರಾ ಪ್ಯಾಕೇಜ್ ಟೂರ್ ಆಯೋಜಿಸಿದೆ.

ಮೈಸೂರಿಗೆ ಬರುವ ಪ್ರವಾಸಿಗರಿಗೆ ಕೆಎಸ್ಆರ್ಟಿಸಿ ಪ್ರವಾಸಿ ಬಸ್ ಸೇವೆ ಆರಂಭಿಸಿದೆ. ಮೈಸೂರು ಮತ್ತು ಅಕ್ಕಪಕ್ಕದ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲಾಗುವುದು. ಗಿರಿ ದರ್ಶನಿ, ಜಲದರ್ಶಿನಿ, ದೇವ ದರ್ಶಿನಿ ಹೆಸರಿನ ಒಂದು ದಿನದ ಪ್ರವಾಸಿ ಪ್ಯಾಕೇಜ್ ವ್ಯವಸ್ಥೆ ಕಲ್ಪಿಸಲಾಗಿದೆ.

ಮೈಸೂರಿನಿಂದ ಈ ಪ್ರವಾಸಿ ಬಸ್ ಸೇವೆ ಆರಂಭವಾಗುತ್ತದೆ. ಅಕ್ಟೋಬರ್ 3ರಿಂದ ಪ್ರವಾಸ ಪ್ಯಾಕೇಜ್ ಟೂರ್ ಆರಂಭವಾಗಿದ್ದು ಅಕ್ಟೋಬರ್ 15 ರವರೆಗೆ ಪ್ರವಾಸಿ ಪ್ಯಾಕೇಜ್ ಟೂರ್ ಇರುತ್ತದೆ.

ಸೇವೆಗಳ ಕುರಿತಾದ ಮಾಹಿತಿ ಮತ್ತು ಮುಂಗಡ ಟಿಕೆಟ್ ಬುಕಿಂಗ್ ಆಗಿ ಕೆಎಸ್ಆರ್ಟಿಸಿಯ www.ksrtc.Karnataka.gov.in ವೆಬ್ಸೈಟ್ ಗೆ ಭೇಟಿ ನೀಡಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read