alex Certify BIG NEWS: ಸಿಎಂ ಬದಲಾವಣೆ ವಿಚಾರ: ಸ್ಫೋಟಕ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರ‍ಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಎಂ ಬದಲಾವಣೆ ವಿಚಾರ: ಸ್ಫೋಟಕ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರ‍ಿಗಳು

ಯಾದಗಿರಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸ, ಹೈಕಮಾಂಡ್ ಭೇಟಿ ಬೆನ್ನಲ್ಲೇ ಈ ಕುರಿತ ಚರ್ಚೆ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕರಣವಾಗುತ್ತಿದೆ. ಈ ನಡುವೆ ಸಿಎಂ ಬದಲಾವಣೆ ವಿಚಾರ, ರಾಜ್ಯ-ದೇಶ-ಜಾಗತಿಕ ವಿಚಾರಗಳ ಬಗ್ಗೆ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.

ಯಾದಗಿರಿಯಲ್ಲಿ ಮಾತನಾಡಿದ ಕೋಡಿಮಠದ ಶ್ರೀಗಳು, ಎಲ್ಲಾ ಸಮುದಾಯದ ಜನರು, ಎಲ್ಲ ಜಾತಿ-ಧರ್ಮ-ವರ್ಗದವರು ಈ ಭೂಮಿ ಮೇಲೆ ವಾಸವಾಗಿದ್ದಾರೆ. ಪ್ರಾಚೀನ ಕಾಲದಿಂದಲೂ ಹಾಲಮತದ ಸಮಾಜ ಅಂತಂದ್ರೆ ಅಡವಿಗಳಲ್ಲಿ ಕುರಿಗಳನ್ನು ಸಾಕುವವರು. ಕುರಿಯ ಇಕ್ಕಿಯಲ್ಲಿ ಲಿಂಗವನ್ನು ಕಂಡವರು. ಪ್ರಕೃತಿ ಮೇಲೆ, ಗಾಳಿ ಮೇಲೆ, ಭೂಮಿಯ ಮೇಲೆ ಅವರು ಅಡವಿಯಲ್ಲಿದ್ದು, ಕಂಡಿದ್ದು, ನೋಡಿದ್ದು, ಅನುಭವಿಸದ್ದನ್ನು ಹೇಳುತ್ತಾ ಬಂದಿದ್ದಾರೆ. ಹಾಲು ಕೆಟ್ಟರು ಹಾಲುಮತ ಸಮಾಜ ಕೆಡಲ್ಲ ಎಂಬ ಮಾತಿದೆ. ಇಂದು ಹಾಲಮತ ಸಮಾಜದ ಕೈಯಲ್ಲಿ ರಾಜ್ಯದ ಅಧಿಕಾರವಿದೆ. ಬಿಡಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಅವರಾಗೇ ಬಿಡಬೇಕು. ನೀವು ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮುಂದೆ ಏನಾಗುತ್ತೆ ಎಂಬುದನ್ನು ಯುಗಾದಿ ಮೇಲೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ಈ ಮೂಲಕ ಕೋಡಿಮಠದ ಶ್ರೀಗಳು ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಸಂಕ್ರಾಂತಿ ಭವಿಷ್ಯ, ಯುಗಾದಿ ಭವಿಷ್ಯ ಎಂದು ಎರಡು ಭಾಗ ಮಾಡಲಾಗುತ್ತದೆ. ಸಂಕ್ರಾಂತಿ ಭವಿಷ್ಯ ರಾಜರುಗಳಿಗೆ, ಮಹಾರಾಜರುಗಳಿಗೆ, ದೊಡ್ಡ ವ್ಯಾಪಾರಸ್ಥರಿಗೆ ಸಂಕ್ರಾಂತಿ ಭವಿಷ್ಯ ಇರುತ್ತದೆ. ಯುಗಾದಿ ಭವಿಷ್ಯ ಚದ್ರಮಾನ ಯುಗಾದಿ ಮೇಲೆ ಬರೋದು ಚಂದ್ರನನ್ನು ಆಧಾರವಾಗಿಟ್ಟುಕೊಂಡು ಮಳೆ, ಬೆಳೆ, ಆಳ್ವಿಕೆ, ರಾಅಜರುಗಳು, ಅವಘಡಗಳು, ಸುಖ, ದುಃಖ, ಸಂತೋಷ ಇದರ ಮೇಲೆ ಹೇಳುವುದು. ಯುಗಾದಿಗೆ ಇನ್ನೀ ಒಂದು ತಿಂಗಳು ದೂರವಿದೆ ಅದರ ಮೇಲೆ ಹೇಳೋದು ಕಷ್ಟ. ಆದರೆ ನಮ್ಮ ಪ್ರಕಾರ ಬರುವ ದಿನಗಳಲ್ಲಿ ಕರ್ನಾಟಕ್ಕೆ ತೊಂದರೆ, ತಾಪತ್ರವಿಲ್ಲ. ಮಳೆ, ಬೆಳೆ ಚನ್ನಾಗಿದೆ. ಸುಭಿಕ್ಷೆ ಇರಲಿದೆ ಎಂದು ಹೇಳಿದರು.

ಯುಗಾದಿ ಬಳಿಕ ಜಾಗತಿಕ ಮಟ್ಟದಲ್ಲಿ ಅಜಾಗರುಕತೆ ಇದೆ. ಕಳೆದ ವರ್ಷಕ್ಕಿಂತ ಈ ವರ್ಷ ಇನ್ನೂ ಭೀಕರತೆ ಕಾಡುವ ಲಕ್ಷಣವಿದೆ. ಭೂ ಸುನಾಮಿ, ಜಲ ಸುನಾಮಿ, ಬಾಹ್ಯ ಸುನಾಮಿ, ಕಟ್ಟಡಗಳು ಉರುಳುವುದು, ಸಾವು-ನೋವು ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...