
ಮಡಿಕೇರಿ: ವಿದ್ಯುತ್ ಬಿಲ್ ಕಲೆಕ್ಟರ್ ಗೆ ಚೂರಿಯಿಂದ ಇರಿದ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಜಂಬೂರು ಬಾಣೆಯಲ್ಲಿ ನಡೆದಿದೆ.
ಗಾಯಗೊಂಡ ಪ್ರಶಾಂತ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಾದಾಪುರ ಪೊಲೀಸರು ಆರೋಪಿ ರತೀಶ್(35) ಎಂಬುವನನ್ನು ಬಂಧಿಸಿದ್ದಾರೆ.
ವಿದ್ಯುತ್ ಬಿಲ್ ನಲ್ಲಿ ವ್ಯತ್ಯಾಸ ಬಂದ ಹಿನ್ನೆಲೆ ಇಬ್ಬರ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ವಾಗ್ವಾದ ತಾರಕಕ್ಕೇರಿ ರತೀಶ್ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.