
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಚಿತ್ರಗಳು ಒಂದಾದ್ಮೇಲೆ ಒಂದರಂತೆ ಪ್ಲಾಪ್ ಆಗ್ತಿವೆ. ಸಿರ್ಫಿರಾ ಹೆಚ್ಚು ಪ್ರದರ್ಶನ ಕಾಣಲಿಲ್ಲ. ಈಗ ಅಕ್ಷಯ್ ಗಮನ ʼಖೇಲ್ ಖೇಲ್ ಮೇʼ ಚಿತ್ರದ ಮೇಲಿದೆ. ಈ ಮಧ್ಯೆ ಅಕ್ಷಯ್ ಕುಮಾರ್, ಎಲ್ಲರೂ ಮೆಚ್ಚುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ವಿಡಿಯೋ ವೈರಲ್ ಆಗಿದ್ದು, ಬಳಕೆದಾರರ ಮೆಚ್ಚುಗೆ ಗಳಿಸಿದ್ದಾರೆ ಅಕ್ಷಯ್ ಕುಮಾರ್.
ಮುಂಬೈನ ಬೀದಿಗಳಲ್ಲಿ ಅಕ್ಷಯ್ ಕುಮಾರ್ ಜನರಿಗೆ ಆಹಾರ ನೀಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಅವರ ಅಭಿಮಾನಿಗಳ ಸಂಘವೊಂದು ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಅಕ್ಷಯ್ ಮತ್ತು ಅವರ ತಂಡ ಮುಂಬೈನ ಜುಹುದಲ್ಲಿರುವ ತನ್ನ ಮನೆಯ ಹೊರಗೆ ಜನರಿಗೆ ಆಹಾರವನ್ನು ನೀಡುತ್ತಿರುವುದನ್ನು ಕಾಣಬಹುದು. ಅಕ್ಷಯ್ ತನ್ನ ಮುಂಬರುವ ಚಿತ್ರದ ಯಶಸ್ಸಿಗಾಗಿ ಈ ಕೆಲಸ ಮಾಡ್ತಿದ್ದಾರೆ ಎನ್ನಲಾಗಿದೆ.
ವೀಡಿಯೋದಲ್ಲಿ ಅಕ್ಷಯ್ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮಹಿಳೆಯೊಬ್ಬರಿಗೆ ಊಟದ ತಟ್ಟೆ ನೀಡುತ್ತಿದ್ದಾರೆ. ಮಹಿಳೆ ಇನ್ನೊಂದಿಷ್ಟು ಮಹಿಳೆಯರನ್ನು ಅಲ್ಲಿಗೆ ಕರೆಯುತ್ತಾರೆ. ಅಕ್ಷಯ್ ಕೆಲಸ ನೋಡಿದ ನೆಟ್ಟಿಗರು, ನಟನನ್ನು ಹಾಡಿಹೊಗಳಿದ್ದಾರೆ.