
ಕಾರ್ತಿಕ್ ಆರ್ಯನ್ ಆಗಮಿಸಿದ ಕಾರು ರಾಂಗ್ ಸೈಡ್ ನಲ್ಲಿ ನಿಲ್ಲಿಸಿದ ಪರಿಣಾಮ ಟ್ರಾಫಿಕ್ ಪೊಲೀಸರು ಚಲನ್ ವಿತರಿಸಿದ್ದು, ಈ ಸಂದರ್ಭದಲ್ಲಿ ಕಾರ್ತಿಕ್ ಆರ್ಯನ್ ದೇವಾಲಯದ ಒಳಗಿದ್ದರು. ಆದರೂ ಕೂಡ ಅವರು ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ.
ಸಾಂಪ್ರದಾಯಿಕ ಉಡುಪಿನಲ್ಲಿ ಬಂದಿದ್ದ ಕಾರ್ತಿಕ್ ಆರ್ಯನ್, ದೇವಾಲಯದಲ್ಲಿದ್ದ ಭಕ್ತರು ಗುರುತಿಸಿದ ವೇಳೆ ಅವರಿಗೆ ನಮಿಸಿದ್ದಾರೆ. ಇಂದು ಬಿಡುಗಡೆಯಾಗಿರುವ ಚಿತ್ರಕ್ಕೆ ದೇವರ ಆಶೀರ್ವಾದ ಬೇಡಿ ಅವರು ದೇಗುಲಕ್ಕೆ ಆಗಮಿಸಿದ್ದರು.
‘ಶಹಜಾದೆ’ ಸಿನಿಮಾ ಅಲ್ಲು ಅರ್ಜುನ್, ಪೂಜಾ ಹೆಗಡೆ ಅಭಿನಯದ ತೆಲುಗಿನ ‘ಅಲಾ ವೈಕುಂಟಪುರಂ’ರಿಮೇಕ್ ಆಗಿದ್ದು ಇದನ್ನು ರೋಹಿತ್ ಧವನ್ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಕೃತಿ ಸನಾನ್, ರೋನಿತ್ ರಾಯ್, ಮೋನಿಷಾ ಕೊಯಿರಲಾ, ಸನ್ನಿ ಹಿಂದುಜಾ ಸೇರಿದಂತೆ ಹಲವರು ನಟಿಸಿದ್ದಾರೆ.