ಬೆಂಗಳೂರು ಕಂಬಳದಲ್ಲಿ ಪದಕ ಗೆದ್ದ ‘ಕಾಂತಾರ’ ಶಿವ ಓಡಿಸಿದ್ದ ಕೋಣಗಳು | Bengaluru Kambala

ಬೆಂಗಳೂರು : ‘ಕಾಂತಾರ’ ಚಿತ್ರ ಹೊಸ ಸಂಚಲನ ಸೃಷ್ಟಿಸಿದ ಸಿನಿಮಾ. ಈ ಸಿನಿಮಾದ ಶುರುವಿನಲ್ಲಿ ಜನಪ್ರಿಯ ಕ್ರೀಡೆ ಕಂಬಳ ತೋರಿಸಲಾಗಿತ್ತು. ಇದೀಗ ವಿಷಯ ಅಂದರೆ ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಓಡಿಸಿದ್ದ ಎರಡು ಕೋಣಗಳು ಬೆಂಗಳೂರು ಕಂಬಳ ಕ್ರೀಡೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ನಗರದ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಬೆಂಗಳೂರು ಕಂಬಳ ಕ್ರೀಡೆಯಲ್ಲಿ ಕಾಂತಾರ ಶಿವ ( ರಿಷಬ್ ಶೆಟ್ಟಿ) ಓಡಿಸಿದ್ದ ಅಪ್ಪು-ಕಿಟ್ಟಿ ಎಂಬ ಕೋಣಗಳು ಕನೆಹಲಗೆ ವಿಭಾಗದಲ್ಲಿ ಪದಕ ಪಡೆದುಕೊಂಡಿದೆ. ಉಡುಪಿ ಜಿಲ್ಲೆಯ ಬೈಂದೂರಿನ ಪರಮೇಶ್ವರ್ ಭಟ್ ಅವರ ಅಪ್ಪು ಮತ್ತು ಕಿಟ್ಟಿ ಕೋಣಗಳು ಬೆಂಗಳೂರು ಕಂಬಳದಲ್ಲಿ ಭಾಗಿಯಾಗಿದ್ದವು.

ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ಈ ಎರಡು ಕೋಣಗಳನ್ನು ಓಡಿಸಿ ಬಹುಮಾನ ಗೆಲ್ಲುತ್ತಾರೆ. ಇದಕ್ಕೆ ಪ್ರೇಕ್ಷಕರು ಶಿಳ್ಳೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು. ಇದೀಗ ರಿಯಲ್ ಕಂಬಳದಲ್ಲೂ ಈ ಕೋಣಗಳು ಪ್ರಶಸ್ತಿ ಗೆದ್ದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read