ಬೆಂಗಳೂರು: ಬೆಂಗಳೂರಿನ ಎಲ್ಲೆಡೆಗಳಲ್ಲಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಅಳವಡಿಸುವಂತೆ ಬಿಬಿಎಂಪಿ ಖಡಕ್ ನೋಟಿಸ್ ನೀಡಿದೆ.
ಅಂಗಡಿ ಮುಂಗಟ್ಟುಗಳು, ಹೋಟೆಲ್, ಮಾಲ್ ಸೇರಿದಂತೆ ಎಲ್ಲಾ ಮಾಲೀಕರಿಗೂ ನೋಟಿಸ್ ನೀಡಿದ್ದು, ಫೆಬ್ರವರಿ 28ರೊಳಗೆ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಿದೆ.
ಪಾಲಿಕೆ ವ್ಯಾಪ್ತಿಯ 34,262 ಅಂಗಡಿಗಳಿಗೆ, ಬೊಮ್ಮನಹಳ್ಳಿ ವ್ಯಾಪ್ತಿಯ 6,762, ಯಲಹಂಕ 4838, ದಾಸರಹಳ್ಳಿ 1458, ಮಹದೇವಪುರ 4938, ಬೆಂಗಳೂರು ಪಶ್ಚಿಮ ವಲಯ 5,650, ರಾಜರಾಜೇಶ್ವರಿ ನಗರ 2010 ನೋಟಿಸ್ ನೀಡಲಾಗಿದೆ.