
ಕಲಬುರಗಿ: ಚರಂಡಿಗೆ ಟಿಪ್ಪರ್ ಲಾರಿ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ಮುಕುಂದ್(12), ಮಹಮ್ಮದ್ ಸಲೀಂ(66) ಮೃತಪಟ್ಟವರು ಎಂದು ಹೇಳಲಾಗಿದೆ. ನಿನ್ನೆ ರಾತ್ರಿ ಮನೆ ನಿರ್ಮಾಣಕ್ಕೆ ಟಿಪ್ಪರ್ ನಲ್ಲಿ ಮರಳು ತರಲಾಗಿತ್ತು. ಮರಳು ಅನ್ ಲೋಡ್ ಮಾಡುವಾಗ ಚರಂಡಿಗೆ ಟಿಪ್ಪರ್ ಲಾರಿ ಬಿದ್ದಿದೆ. ಈ ವೇಳೆ ಲಾರಿಯಡಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ. ವಾಡಿ ಪಟ್ಟಣದ ಕಲಕಂಬ್ ಬಡಾವಣೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.