ಚಿತ್ರದುರ್ಗ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದೇ ಮಾರ್ಚ್ 18ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ.
ಅಪ್ರೆಂಟಿಸ್ ಸಂದರ್ಶನದಲ್ಲಿ ಯುಜುಕಿ ಇಂಡಿಯಾ ಪ್ರೈ.ಲೀ ನೆಲಮಂಗಲ, ಬೆಂಗಳೂರು ಮತ್ತು ಇಟನ್ ಏರೋಸ್ಪೆಸ್ ದೇವನಹಳ್ಳಿ ಈ ಖಾಸಗಿ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಪುರುಷ, ಮಹಿಳೆ ಅಭ್ಯರ್ಥಿಗಳನ್ನು ನೇರವಾಗಿ ಅಯ್ಕೆ ಮಾಡಿಕೊಳ್ಳುವ ಸಂಬಂಧ ಭಾಗವಹಿಸಲಿವೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಮೆಕಾನಿಕಲ್, ಎಲೆಕ್ಟ್ರೀಕಲ್, ಎಲೆಕ್ಟ್ರಾನಿಕ್ಸ್ ವಿದ್ಯಾರ್ಹತೆವುಳ್ಳವರು ಅಪ್ರೆಂಟಿಸ್ ಹುದ್ದೆಗಳಿಗೆ ನೇರ ನೇಮಕಾತಿ ಸಂದರ್ಶನದಲ್ಲಿ ಭಾಗವಹಿಸಬಹುದು. ವಯೋಮಿತಿ 18 ರಿಂದ 26 ವರ್ಷದೊಳಗಿರಬೇಕು. 5 ಪ್ರತಿ ಬಯೋಡಾಟಾ, ವಿದ್ಯಾರ್ಹತೆಯ ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್, ಪೋಟೋಸ್ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಪಾಲ್ಗೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ದೂರವಾಣಿ ಸಂಖ್ಯೆ 7022459064, 8310785143, 8105619020 ಗೆ ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.