Viral Video | ‘ಜೈಲರ್’ ಚಿತ್ರದ ‘ಕಾವಾಲಯ್ಯ’ ಹಾಡಿಗೆ ಜಪಾನ್ ರಾಯಭಾರಿಯ ಭರ್ಜರಿ ಸ್ಟೆಪ್ಸ್

Japanese Ambassador Dances to Kaavaalaa from Jailer, Showing Affection for Rajinikanth | Japanese Ambassador Dances To Kaavaalaa#8217; From Jailer#8217;, Showing Affection For Rajinikanth - Dance, Hiroshi Suzuki, India, Jailer, Kaavaalaa, Rajinikanth

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿನಯದ ‘ಜೈಲರ್’ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಬಿಡುಗಡೆಯಾಗಿರುವ ಈ ಚಿತ್ರ ಈಗಾಗಲೇ ನೂರಾರು ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದ್ದು, ಬಾಕ್ಸಾಫೀಸಿನಲ್ಲಿ ಹೊಸ ದಾಖಲೆ ಬರೆಯುವತ್ತ ಮುನ್ನುಗ್ಗಿದೆ.

ರಜನಿಕಾಂತ್ ಅವರಿಗೆ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದು, ಅದರಲ್ಲೂ ಜಪಾನ್ ಅಭಿಮಾನಿ ಜೋಡಿಯೊಂದು ‘ಜೈಲರ್’ ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನವನ್ನು ವೀಕ್ಷಿಸಲು ಚೆನ್ನೈಗೆ ಆಗಮಿಸಿತ್ತು. ಇದೀಗ ನಾನು ರಜತೆಕಾಂತ್ ಅವರ ಕಟ್ಟಾ ಅಭಿಮಾನಿ ಎಂದು ಹೇಳಿಕೊಂಡಿರುವ ಭಾರತದಲ್ಲಿನ ಜಪಾನ್ ರಾಯಭಾರಿ ‘ಜೈಲರ್’ ಚಿತ್ರದ ಹಾಡೊಂದಕ್ಕೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ರಾಯಭಾರಿ ಹಿರೋಶಿ ಸುಜುಕಿ, ಜೈಲರ್ ಚಿತ್ರದ ‘ಕಾವಾಲಯ್ಯ’ ಹಾಡಿಗೆ ಖ್ಯಾತ ಯೂಟ್ಯೂಬರ್ ಮೆಯೊ ಸ್ಯಾನ್ ಜೊತೆ ಹೆಜ್ಜೆ ಹಾಕಿದ್ದು, ಹಿಮ್ಮೇಳದಲ್ಲಿ ಜಪಾನಿಯರ ಗುಂಪು ಕಾಣಿಸಿಕೊಂಡಿದೆ. ಹಿರೋಶಿ ಸುಜುಕಿ, ನೀಲಿ ಬಣ್ಣದ ಟ್ರೌಜರ್ ಹಾಗೂ ಬ್ಲೇಜರ್, ಬಿಳಿ ಶರ್ಟ್ ಧರಿಸಿ ಕುಣಿದಿದ್ದು, ಇದರ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

https://twitter.com/HiroSuzukiAmbJP/status/1691731446917214612?ref_src=twsrc%5Etfw%7Ctwcamp%5Etweetembed%7Ctwterm%5E1691731446917214612%7Ctwgr%5Ec54cdeaadaff5d81d5fdb04886d4f4524bf94db0%7Ctwcon%5Es1_&ref_url=https%3A%2F%2Ftelugustop.com%2Fjapanese-ambassador-dances-to-kaavaalaa-from-jailer-showing-affection-for-rajinikanth

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read