ಭಾರತೀಯರು ಆಹಾರ ಪ್ರೇಮಿಗಳು. ಎಲ್ಲೆಲ್ಲಿ ರುಚಿ ರುಚಿ ಆಹಾರ ಸಿಗುತ್ತೆ ಅನ್ನೋದನ್ನು ಹುಡುಕಿ, ಅಲ್ಲಿಗೆ ತಿನ್ನೋದಕ್ಕೆ ಹೋಗ್ತಾರೆ. ಭಾರತದಲ್ಲಿ ಪರಾಠ ಹೆಚ್ಚು ಪ್ರಸಿದ್ಧಿ ಪಡೆದಿದೆ. ಆಲೂಗಡ್ಡೆ, ಈರುಳ್ಳಿ, ಪಾಲಾಕ್ ಸೇರಿದಂತೆ ಅನೇಕ ಆಹಾರ ಪದಾರ್ಥಗಳನ್ನು ಬಳಸಿ ಪರಾಠ ತಯಾರಿಸಲಾಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ನೀವು ಸಾಕಷ್ಟು ಆಹಾರದ ವಿಡಿಯೋಗಳನ್ನು ನೋಡ್ತಿರುತ್ತೀರಿ. ಇತ್ತೀಚಿಗೆ ಜೈಪುರದ ವಿಜಯಪಥ ಮಾನಸ ಸರೋವರದ ಬಳಿ ಇರುವ ಜೈಪುರ ಪರಾಠ ಜಂಕ್ಷನ್ ಎಲ್ಲರ ಗಮನ ಸೆಳೆದಿದೆ. ಅಲ್ಲಿ ನೀವು ಅತಿ ದೊಡ್ಡ ಬಾಹುಬಲಿ ಪರಾಠದ ರುಚಿ ನೋಡಬಹುದು.
ಎರಡು ಕೆ.ಜಿ. ಆಲೂಗಡ್ಡೆ ಬಳಸಿ ತಯಾರಿಸುವ ಈ ಪರಾಠ ಸಿದ್ಧವಾದ್ಮೇಲೆ ನಾಲ್ಕು ಕೆಜಿ ಆಗುತ್ತದೆ. ಇದನ್ನು ಇಡೀ ಪ್ರಪಂಚದ ಅತ್ಯಂತ ದೊಡ್ಡ ಪರಾಠ ಎನ್ನಲಾಗಿದೆ. ಜೈಪುರ ಪರಾಠ ಜಂಕ್ಷನ್ ಈಗ ಹೊಸ ಚಾಲೆಂಜ್ ಒಂದನ್ನು ಶುರು ಮಾಡಿದೆ. ನಾಲ್ಕು ಕೆಜಿಯ ಬಾಹುಬಲಿ ಪರಾಠವನ್ನು ಒಬ್ಬರೇ ತಿಂದು ಮುಗಿಸಿದ್ರೆ ನಿಮಗೊಂದು ಭರ್ಜರಿ ಉಡುಗೊರೆ ಇದೆ.
ರೆಸ್ಟೋರೆಂಟ್ ಒಂದು ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಘೋಷಣೆ ಮಾಡಿದೆ. ನೀವು ಒಂದು ಲಕ್ಷ ರೂಪಾಯಿ ಬಹುಮಾನ ಪಡೆಯಲು ಎಂಟು ನೂರು ರೂಪಾಯಿಯ ಈ ಬಾಹುಬಲಿ ಪರಾಠ ಖರೀದಿ ಮಾಡಿ, ಅದನ್ನು ಸೇವನೆ ಮಾಡಬೇಕು. ಮೊಸರು ಹಾಗೂ ಚಟ್ನಿ ಜೊತೆ ಪರಾಠವನ್ನು ಸರ್ವ್ ಮಾಡಲಾಗುತ್ತದೆ.