
ಹುಬ್ಬಳ್ಳಿ: ಇದು ಹುಬ್ಬಳ್ಳಿ, ಅಹಮದಾಬಾದ್ ಅಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.
ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವಂತೆ ಕೇಂದ್ರ ಸಚಿವ ಅಮಿತ್ ಶಾ ಕರೆ ನೀಡಿದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಜನರ ಆಶೀರ್ವಾದ, ಪ್ರೀತಿ ಇರುವವರೆಗೂ ನನ್ನನ್ನು ಸೋಲಿಸಲು ಆಗುವುದಿಲ್ಲ. ಜನರ ಆಶೀರ್ವಾದದಿಂದಲೇ ಆರು ಬಾರಿ ಶಾಸಕನಾಗಿದ್ದೇನೆ. ನನ್ನನ್ನು ಸೋಲಿಸಿ ಎಂದು ಬಿಜೆಪಿ ರಾಷ್ಟ್ರೀಯ ನಾಯಕರು ಕರೆ ನೀಡಿದ್ದಾರೆ. ಜನರ ಪ್ರೀತಿ ಇರುವ ನನ್ನನ್ನು ಗೆಲ್ಲಿಸಿ ಎಂದು ಶೆಟ್ಟರ್ ಮನವಿ ಮಾಡಿದ್ದಾರೆ.
ನನ್ನನ್ನು ಸೋಲಿಸಲು ಇದು ಗುಜರಾತ್ ಅಲ್ಲ, ಕರ್ನಾಟಕ ಎಂದು ಶೆಟ್ಟರ್ ಹೇಳಿದ್ದಾರೆ ಬಿಜೆಪಿ ರಾಷ್ಟ್ರೀಯ ನಾಯಕರು ನನ್ನನ್ನು ಸೋಲಿಸಿ ಎಂದಿದ್ದಾರೆ. ಮೂವತ್ತು ವರ್ಷ ರಾಜಕಾರಣ ಮಾಡಿ ಆರು ಬಾರಿ ಶಾಸಕನಾಗಿದ್ದೇನೆ ಜನರ ಪ್ರೀತಿ ವಿಶ್ವಾಸವಿರುವ ತನಕ ನನ್ನನ್ನು ಸೋಲಿಸಲು ಆಗುವುದಿಲ್ಲ. ಇದು ಹುಬ್ಬಳ್ಳಿ, ಅಹಮದಾಬಾದ್ ಅಲ್ಲ. ಇದು ಹುಬ್ಬಳ್ಳಿ ಜನರ ಮರ್ಯಾದೆ ಪ್ರಶ್ನೆ. ಕಾಂಗ್ರೆಸ್ ಪಕ್ಷ ಗೆಲ್ಲಿಸಿ ಎಂದು ಹೇಳಿದ್ದಾರೆ.